ಶನಿವಾರಸAತೆ, ಜೂ. ೩೦: ಸಮೀಪದ ಕೊಡ್ಲಿಪೇಟೆ ಹೋಬಳಿ ಕಂದಾಯ ಇಲಾಖೆ ವತಿಯಿಂದ ಬೆಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ವ್ಯಾಪ್ತಿಯ ಬೆಸೂರು ವೃತ್ತಕ್ಕೆ ಸಂಬAಧಪಟ್ಟAತೆ ಪೌತಿ ಖಾತೆ ಆಂದೋಲನ ನಡೆಯಿತು.
ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ತಮ್ಮ ಜಮೀನಿಗೆ ಸಂಬAಧಪಟ್ಟ ಅಹವಾಲುಗಳ ಅರ್ಜಿ ಸಲ್ಲಿಸಿದರು. ಕೊಡ್ಲಿಪೇಟೆ ನಾಡಕಚೇರಿ ಕಂದಾಯ ಪರಿವೀಕ್ಷಕ ಮನುಕುಮಾರ್ ಅರ್ಜಿ ಸ್ವೀಕರಿಸಿ, ಮಾತನಾಡಿದರು. ಗ್ರಾಮ ಆಡಳಿತ ಅಧಿಕಾರಿ ಎಸ್.ಆರ್. ವಿದ್ಯಾ ಹಾಗೂ ಸಿಬ್ಬಂದಿ ಇದ್ದರು.