‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿಯಿಲ್ಲ. ಮನುಷ್ಯ ನಾಯಿಯನ್ನು ಕಚ್ಚಿದರೆ ಸುದ್ದಿ ಎಂಬುದು ಪತ್ರಿಕಾ ಜಗತ್ತಿನ ಸಾರ್ವಕಾಲಿಕ ನುಡಿ.’ ಕಲೆ, ಸಾಹಿತ್ಯ, ರಾಜಕೀಯ, ಕ್ರೀಡೆ, ವ್ಯಾವಹಾರಿಕ ಮಾಹಿತಿ, ಮನೋರಂಜನೆ, ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲಾ ತರಹದ ಸುದ್ದಿಯನ್ನೂ ನಾವಿರುವಲ್ಲಿಗೇ ತಲುಪಿಸಬಲ್ಲ ಹಾಗೂ ಮಕ್ಕಳು, ಮಹಿಳೆಯರು, ಪುರುಷರು, ವಯೋವೃದ್ಧರು, ಯುವಜನತೆ ಎಲ್ಲಾ ವರ್ಗದವರಿಗೂ ಅವರವರ ಅಗತ್ಯಕ್ಕೆ ತಕ್ಕಂತೆ ಜ್ಞಾನವಾಹಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಗಳ ಮಹತ್ವ ಅತ್ಯಂತ ಹಿರಿದಾದುದು.

ಪತ್ರಿಕಾ ದಿನವಾದ ಇಂದು ವೃತ್ತಪತ್ರಿಕೆಗಳು ಅಥವಾ ದಿನಪತ್ರಿಕೆ, ಸಂಜೆ ಪತ್ರಿಕೆಗಳಷ್ಟೇ ಅಲ್ಲದೆ ವಾರ(ಸಾಪ್ತಾಹಿಕ) ಪಾಕ್ಷಿಕ, ಮಾಸಿಕ, ದ್ವೆöÊಮಾಸಿಕ, ತ್ರೆöÊಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿಯೂ ಮಾಹಿತಿಗಳನ್ನು ಓದುಗರಿಗೆ ಉಣಬಡಿಸುವ ಪತ್ರಿಕೆಗಳು ಎಲ್ಲಾ ವಯೋಮಾನದವರಿಗೂ ಮನೋರಂಜನೆ ನೀಡಬಲ್ಲವು. ಕರ‍್ಯಾಂಗ, ನ್ಯಾಯಾಂಗ, ಶಾಸಕಾಂಗದಷ್ಟೇ ನಂತರದ ನಾಲ್ಕನೇ ಸ್ಥಾನವನ್ನು ಪತ್ರಿಕಾರಂಗ ಪಡೆದಿರುವುದು ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಪತ್ರಿಕೆಗಳಿಗಿರುವ ಮಹತ್ವ ಹಾಗೂ ಜವಾಬ್ದಾರಿಯನ್ನು ಅರಿಯಬಹುದಾಗಿದೆ.

ಇಂತಹ ಪತ್ರಿಕೆಗಳ ಇತಿಹಾಸದತ್ತ ಒಮ್ಮೆ ಅವಲೋಕಿಸುವುದಾದರೆ ಕರಪತ್ರಗಳು ಮತ್ತು ಧರ್ಮ ಪ್ರಚಾರಕ್ಕಾಗಿ ಮುದ್ರಿತ ಹಾಳೆಗಳನ್ನು ಊರು-ಊರುಗಳಿಗೆ ಬೀದಿ-ಬೀದಿಗಳಿಗೆ ಮನೆ-ಮನೆಗಳಿಗೆ ತಲುಪಿಸುತ್ತಿದ್ದು ಮೂಲದಿಂದ ಆರಂಭವಾದದ್ದೇ ಪತ್ರಿಕೆಗಳ ಉಗಮಕ್ಕೆ ಕಾರಣವಾಯಿತು.

ಕರ್ನಾಟಕದಲ್ಲಿ ಪತ್ರಿಕೋದ್ಯಮದ ಆರಂಭವಾದದ್ದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಿಮಾತ್ಯ ದೇಶಗಳ ಸಂಪರ್ಕವಾದ ನಂತರದಲ್ಲೇ ಅವರು ಮುದ್ರಣಯಂತ್ರಗಳಲ್ಲಿ ಕನ್ನಡನಾಡಿನಲ್ಲೂ ಬಳಕೆಗೆ ತಂದರು. ೧೮೪೩ನೇ ಜುಲೈ ಒಂದರಲ್ಲಿ ಪ್ರಾರಂಭವಾದ “ಮಂಗಳೂರು ಸಮಾಚಾರ” ಪತ್ರಿಕೆಯು ಕರ್ನಾಟಕದ ಪ್ರಪ್ರಥಮ ಪತ್ರಿಕೆಯಾಗಿದೆ. ಈ ಪತ್ರಿಕೆಯಲ್ಲಿ ಸ್ವಿಜ್ಜರ್‌ಲ್ಯಾಂಡ್‌ನ ಇವಾಂಜಲಿಕಲ್ ಸೊಸೈಟಿಯ ರೆವರೆಂಡ್ ಮಾಗಲಿಂಗ್‌ರವರು ಮುದ್ರಿಸುತ್ತಿದ್ದರು. ಈ ಪತ್ರಿಕೆಯ ಮೂಲ ಉದ್ದೇಶ ಕ್ರೆöÊಸ್ತ ಧರ್ಮದ ಪ್ರಚಾರಕ್ಕೆ ಎಂದಿತ್ತು. ೧೫ ದಿನಗಳಿಗೊಮ್ಮೆ ಪ್ರಕಟವಾಗುತ್ತಿದ್ದು ಪಾಕ್ಷಿಕ ಪತ್ರಿಕೆಯಾಗಿ ರೂಪುಗೊಂಡ ಪತ್ರಿಕೆ ಅತ್ಯಲ್ಪ ಅವಧಿಯಲ್ಲಿಯೇ ಬಳ್ಳಾರಿಗೆ ವರ್ಗಾವಣೆಗೊಂಡು ಕನ್ನಡ ಸಮಾಚಾರ ಎಂಬ ಹೊಸ ಹೆಸರನ್ನು ತಾಳಿ ೧೮೪೪ರ ಮಾರ್ಚ್ ಒಂದರAದು ಬಳ್ಳಾರಿಯಿಂದ ಪ್ರಕಟವಾಗಲು ಪ್ರಾರಂಭವಾಯಿತು. ಒಂದು ಪೈಸೆಗೆ ಪ್ರಾರಂಭವಾದ ಪತ್ರಿಕೆ ಸ್ವಲ್ಪ ಅವಧಿಯಲ್ಲಿಯೇ ಎರಡು ಪೈಸೆಗೆ ಮಾರಾಟವಾಗತೊಡಗಿತು.

ಮತ್ತೆ ಬದಲಾವಣೆಗೊಂಡು ಮಂಗಳೂರಿಗೆ ವರ್ಗಾವಣೆಗೊಂಡು ಕನ್ನಡ ಸುವಾರ್ತಿಕ, ಕರ್ನಾಟಕ ಪತ್ರಿಕೆ, ಬಾಲಪತ್ರ, ಸತ್ಯದೀಪಿಕೆ, ಕ್ರಿಸ್ತ ಸಭಾಪತ್ರ ಎಂಬ ಬೇರೆ ಬೇರೆ ಹೆಸರುಗಳಿಂದ ೧೯೪೦ರವರೆಗೆ ಬೆಳೆಯಿತು. ೧೮೪೪ಕ್ಕೂ ಮುನ್ನ ಭಾಷಾ ಎಂಬ ಹೆಸರಿನ ಪತ್ರಿಕೆ ಜನ್ಮತಾಳಿತಾದರೂ ಅಲ್ಪಕಾಲದಲ್ಲಿಯೇ ನಿಂತುಹೋಯಿತು.

ಕನ್ನಡ ಪತ್ರಿಕೆ ಜಗತ್ತನ್ನು ಗಮನಿಸಿದಾಗ, ಮೈಸೂರು, ಮದ್ರಾಸ್, ಮಂಗಳೂರು ಮತ್ತು ಮುಂಬೈ ಕೇಂದ್ರಗಳ ವಿವಿಧ ಖಾಸಗಿ ಅಧಿಕಾರಿಗಳಷ್ಟೇ ಅಲ್ಲದೆ ಅಧಿಕಾರಿಗಳೂ ಕೂಡ ಪತ್ರಿಕೆಗಳನ್ನು ಪ್ರಾರಂಭಿಸಿ ಕೆಲವು ಕಾಲ ನಡೆಸಿಕೊಂಡು ಬರೆದಿರುವುದನ್ನು ಕಾಣಬಹುದು. ಬ್ರಿಟಿಷರಂತೂ ಕನ್ನಡ ಸಮಾಚಾರ ನಿಂತ ಮೇಲೆ ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರು ಪ್ರಾಂತ್ಯಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ವಿಧ್ವಾಂಸರು ಪತ್ರಿಕೆ ನಡೆಯಲು ಸಹಕರಿಸಿದ ಪರಿಣಾಮ ೧೮೬೪ ರವರೆಗೂ ಪತ್ರಿಕೆ ನಡೆದು ಬಂದಿತು.

ಹೀಗೆ ಬೆಳೆದು ಬಂದ ಪತ್ರಿಕಾ ಪ್ರಪಂಚ ಸ್ವಾತಂತ್ರö್ಯ ನಂತರದಲ್ಲೂ ರಾಜ್ಯದ ಎಲ್ಲಾ ಭಾಗಗಳಿಗೂ ಪ್ರೇರಣೆ ನೀಡುತ್ತಾ ಸಾಗಿ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿ ಸಮೃದ್ಧವಾದ ಸುದ್ದಿ, ಮಾರ್ಗದರ್ಶನ, ಮಾಹಿತಿ ಹಾಗೂ ಮನರಂಜನೆಯ ಸಾಧನವಾಗತೊಡಗಿತು. ಸಮಗ್ರ ಮಾಹಿತಿಯನ್ನು ಹೊತ್ತು ತರುತ್ತಿದ್ದ ಪತ್ರಿಕೆಗಳು ಸಾಮಾಜಿಕ ವಿಚಾರಗಳ ಬಗ್ಗೆ ಆಸಕ್ತರಾಗತೊಡಗಿದವು. ಬೆಳಗೆದ್ದ ತಕ್ಷಣವೇ ಪತ್ರಿಕೆಗಳನ್ನು ಓದಿಯೇ ತಮ್ಮ ದಿನಚರಿಯನ್ನು ಪ್ರಾರಂಭಿಸುವವರ ಸಂಖ್ಯೆ ಹೇರಳವಾಗತೊಡಗಿತು.

ರಾಜ್ಯಮಟ್ಟದಲ್ಲಿ ಪತ್ರಿಕೆಗಳು ಮುದ್ರಣಗೊಂಡ ನಂತರದಲ್ಲಿ ಅವುಗಳು ರಾಜ್ಯದ ವಿವಿಧ ಜಿಲ್ಲೆಗಳನ್ನು ತಾಲೂಕು ಹಾಗೂ ಹೋಬಳಿ ಮಟ್ಟಗಳಿಗೆ ತಲುಪುವಲ್ಲಿ ಸಾಕಷ್ಟು ಸರ್ಕಸ್ ಮಾಡಬೇಕಿತ್ತು. ದಿನಪತ್ರಿಕೆಗಳು ಅಂದೇ ಜನರನ್ನು ತಲುಪುವುದು ಕೂಡ ಒಂದು ಚಾಲೆಂಜಿAಗ್ ಕೆಲಸವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಆಗ ಈಗಿನಂತೆ ಟೈಪಿಂಗ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವ ವ್ಯವಸ್ಥೆಯೂ ಇಲ್ಲದೆ ಮೊಳೆ ಜೋಡಿಸಿ ಅಕ್ಷರಗಳನ್ನು ಪ್ರಿಂಟ್ ಮಾಡಬೇಕಾದ ವ್ಯವಸ್ಥೆಯಿತ್ತು. ಸುದ್ದಿಗಳನ್ನು ಸಂಗ್ರಹಿಸುವುದು ಕೂಡ ಒಂದು ಕ್ಲಿಷ್ಟಕರ ಪರಿಸ್ಥಿತಿಯಿತ್ತು. ಇಂತಹ ಎಲ್ಲ ಹಂತಗಳನ್ನು ದಾಟುತ್ತಾ ಇಂದು ಅತ್ಯುತ್ತಮ ಸಂವಹನದ ಮೂಲಕ ಸುದ್ದಿಗಳನ್ನು ಟೈಪ್ ಮಾಡಿಯೇ ಪತ್ರಿಕಾ ಕಚೇರಿಗಳಿಗೆ ತಲುಪಿಸುವಂತಹ ಸುವ್ಯವಸ್ಥೆಯ ಘಟ್ಟವನ್ನು ತಲುಪಿದೆ. ರಾಜ್ಯಮಟ್ಟದ ಪತ್ರಿಕೆಗಳು ಸಕ್ರಿಯವಾಗಿದ್ದಂತಹ ಸಮಯದಲ್ಲಿಯೇ ಜಿಲ್ಲಾ ಹಂತದಲ್ಲಿ ಸಣ್ಣಸಣ್ಣ ಪತ್ರಿಕೆಗಳ ಉಗಮವಾಯಿತು. ಸಮಗ್ರ ಜಿಲ್ಲೆ ಹಾಗೆಯೇ ತಾಲೂಕು ಹೋಬಳಿಗಳ ಸುದ್ದಿಯನ್ನು ಕಟ್ಟಿಕೊಡುತ್ತಿದ್ದ ಸಣ್ಣಪುಟ್ಟ ಪತ್ರಿಕೆಗಳು ಕೂಡ ಜಾಗತಿಕ ಹಂತದಲ್ಲಿನ ಬದಲಾವಣೆಯಿಂದಾಗಿ ಸಾಕಷ್ಟು ಪೆಟ್ಟುಗಳನ್ನು ತಿನ್ನಬೇಕಾದ ಪರಿಸ್ಥಿತಿ ಬಂದೊದಗಿತು. ರಾಜ್ಯಮಟ್ಟದ ಪತ್ರಿಕೆಗಳು ಜಿಲ್ಲಾ ಮಟ್ಟದಲ್ಲಿನ ಅಡಿಷನ್ಸ್ ಪ್ರಾರಂಭಿಸಿದ ಹಂತದಲ್ಲಿ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿದವು. ಗಟ್ಟಿಯಾದ ಹಾಗೂ ದಿಟ್ಟನಿರ್ಧಾರ ತಳೆದ ಕೆಲವೇ ಬೆರಳೆಣಿಕೆಯ ಪತ್ರಿಕೆಗಳು ತಮ್ಮತನವನ್ನು ಕಾಯ್ದುಕೊಂಡು ನೆಲೆನಿಂತವು. ಇದೆಲ್ಲದರ ಜೊತೆಗೆ ಬೆಲೆಯ ಏರಿಳಿತವೂ ಕೂಡ ಸಣ್ಣ ಪತ್ರಿಕೆಗಳಿಗೆ ಸಾಕಷ್ಟು ಹೊಡೆತ ನೀಡಿದವು ಎಂದೆನ್ನಬಹುದು.

ಅದೇನೇ ಇರಲಿ ಸಚಿತ್ರ ಹಾಗೂ ಸಮಗ್ರ ಮಾಹಿತಿಯನ್ನು ದೇಶ-ವಿದೇಶಗಳ ಸುದ್ದಿ ವಿಶೇಷತೆಗಳನ್ನು ಹೊತ್ತು ತರುವ ಪತ್ರಿಕೆಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಆಪ್ತ ಸಂಗಾತಿಯೇ ಎಂಬುದರಲ್ಲಿ ಎರಡು ಮಾತಿಲ್ಲ.

ಎಲೆಕ್ಟಾçನಿಕ್ ಮಾಧ್ಯಮಗಳ ಭರಾಟೆಯ ಯುಗದಲ್ಲಿಯೂ ತಮ್ಮ ಸ್ಥಾನವನ್ನು ಬಳಸಿಕೊಳ್ಳುವಲ್ಲಿ ಪತ್ರಿಕೆಗಳ ವ್ಯಾಪ್ತಿ ಸೇವೆ ಗಣನೀಯವಾದದ್ದು. ಒಂದು ಪತ್ರಿಕೆ ತಯಾರಾಗಿ ಬರುವಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆಯೂ ಹೆಚ್ಚೆ. ಜಾಹೀರಾತು ವಿಭಾಗ, ಸಂಪಾದಕೀಯ ವಿಭಾಗ, ಸುದ್ದಿ ಸಂಗ್ರಾಹಕರು, ಪತ್ರಿಕಾ ವರದಿಗಾರರು, ಲೇಖನ, ಕಥೆ, ಕವಿತೆಗಳನ್ನು ಬರೆಯುವ ಬರಹಗಾರರು, ಛಾಯಾಗ್ರಾಹಕರು, ಚಿತ್ರರಚನೆ ಮಾಡುವವರು ಇದೆಲ್ಲವನ್ನು ಸರಿಯಾದ ರೂಪನೀಡಿ ಮುದ್ರಿಸುವುದು ಒಂದು ಹಂತವಾದರೆ, ಸರಿಯಾದ ಸಮಯಕ್ಕೆ ಓದುಗರ ಕೈ ತಲುಪುವಲ್ಲಿ ಪತ್ರಿಕಾ ವಿತರಕರು, ಹೀಗೆ ಒಂದು ತರಹದ ಸಮಗ್ರ ತೊಡಗಿಸಿಕೊಳ್ಳುವಿಕೆಯ ಪರಿಣಾಮ ಒಂದು ಅತ್ಯುತ್ತಮ ಪತ್ರಿಕೆ ತಯಾರಾಗಿ ಸಜ್ಜುಗೊಂಡು ಬರಲು ಸಾಧ್ಯ. ಇಂತಹ ಸಂದರ್ಭದಲ್ಲಿ ಸಾಕಷ್ಟು ಎಡವಟ್ಟುಗಳಾಗುವುದು ಉಂಟು. ಇದೆಲ್ಲವನ್ನು ನಿಭಾಯಿಸಿ ಪತ್ರಿಕೆಗಳನ್ನು ನಡೆಸುವುದು ಇಂದಿನ ಕಾಲಘಟ್ಟದಲ್ಲಿ ಒಂದು ಸಾಧನೆಯೇ ಹೌದು. ಅದೇನೇ ಆಗಲಿ ೨೧ನೇ ಶತಮಾನದ ಈ ಸಮಯದಲ್ಲೂ ತನ್ನ ಜವಾಬ್ದಾರಿ- ಹೊಣೆಯನ್ನು ಅತ್ಯಂತ ನಿಪುಣತೆಯಿಂದ ಹಾಗೆಯೇ ಸಾಕಷ್ಟು ಪೈಪೋಟಿಯ ನಡುವೆಯೂ ರಂಗಕ್ಕಿಳಿದಾಗಿದೆ ಎಂಬ ಭಾವದಿಂದ ಹಾಗೂ ಉಳಿಯಲೇಬೇಕೆಂಬ ಪ್ರೀತಿ-ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ಕ್ಷೇತ್ರದ ಎಲ್ಲಾ ಬಂಧುಗಳಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

- ಡಿ. ಸುಜಲಾದೇವಿ, ಶನಿವಾರಸಂತೆ. ಮೊ. ೯೧೪೧೬೯೨೫೫೬.