ಗೋಣಿಕೊಪ್ಪಲು, ಜೂ. ೩೦ : ಹುಲಿ ದಾಳಿಗೆ ಹೆಣ್ಣು ಚಿರತೆಯೊಂದು ಮೃತಪಟ್ಟಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಹಳ್ಳ ಎಂಬಲ್ಲಿ ಸಂಭವಿಸಿದೆ.
ಹುಲಿ ಹಾಗೂ ಚಿರತೆ ನಡುವೆ ಕಾದಾಟ ನಡೆದು ಅಂದಾಜು ೮ ರಿಂದ ೯ ವರ್ಷ ಪ್ರಾಯದ ಹೆಣ್ಣು ಚಿರತೆ ಮೃತಪಟ್ಟಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್, ಹುಲಿ ಸಂರಕ್ಷಿತ ಪ್ರಾಧಿಕಾರ ನಾಮನಿರ್ದೇಶಿತರಾದ ಕೆ.ಎನ್. ಮಾದಪ್ಪ, ಪಶು ವೈದ್ಯಾಧಿಕಾರಿ ಡಾ. ಹೆಚ್. ರಮೇಶ್, ಡಾ. ಚಂದ್ರಶೇಖರ್, ಅರಣ್ಯ ಇಲಾಖಾ ಅಧಿಕಾರಿಗಳಾದ ಕೆ.ಪಿ. ಗೋಪಾಲ್, ಮುಹಮ್ಮದ್ ಜಿಫಾನ್, ಸಿಬ್ಬಂದಿಗಳ ಸಮಕ್ಷಮ ಚಿರತೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು.