ಗೋಣಿಕೊಪ್ಪ, ಜು. ೧: ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟದಿಂದ ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್, ನಿಕಟಪೂರ್ವ ಅಧ್ಯಕ್ಷ ಕೆ. ಪ್ರಮೋದ್ ಗಣಪತಿ, ಮಡಿಕೇರಿ ತಾಲುಕು ಯುವ ಒಕ್ಕೂಟ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಕಾರ್ಯಕಾರಿ ಸದಸ್ಯರುಗಳಾದ ಜಯಕುಮಾರ್, ನಿಖಿಲ್ ಬೆಳ್ಳಿಯಪ್ಪ, ಇಂದುಮತಿ, ಮದನ್ ಹಾಗೂ ಸದಸ್ಯರು ಹಾಜರಿದ್ದರು.

ಯುವ ಒಕ್ಕೂಟದ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು.