ಮಡಿಕೇರಿ, ಜೂ. ೩೦: ನಗರದ ತಾಲೂಕು ಕಚೇರಿ ಬಳಿ ಇರುವ ಬೃಹದಾಕಾರದ ಗುಂಡಿಯು ಇದೀಗ ನೀರಿನಿಂದ ತುಂಬಿಕೊAಡು ಈಜುಕೊಳವೊಂದು ಸೃಷ್ಟಿಯಾಗಿದೆ. ಪ್ರತಿನಿತ್ಯ ನೂರಾರು ಮಂದಿ ಇಲ್ಲಿಗೆ ಆಗಮಿಸಿ ದಾಖಲಾತಿಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರಿದೀಗ ಮಳೆ ಸುರಿದ ಕಾರಣ ಗುಂಡಿ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ಸಾರ್ವಜನಿಕರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಇದನ್ನು ದಾಟಿ ಕಚೇರಿಗೆ ತೆರಳಲು ಅಸಾಧ್ಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಕಚೇರಿ ಪಕ್ಕದಲ್ಲಿಯೇ ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆ ಕೂಡ ಇದ್ದು, ಇಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಚಿಕಿತ್ಸೆಗೆ ಕೊಂಡೊಯ್ಯುವ ಸಾರ್ವಜನಿಕರೂ ಸಾಹಸ ಮಾಡಿ ಈ ಕೊಳ ದಾಟುವ ಪರಿಸ್ಥಿತಿ ಎದುರಾಗಿದೆ. ನಗರಸಭೆ ಈ ಸಂಬAಧ ಗಮನಿಸಿ ತಾತ್ಕಾಲಿಕ ಪರಿಹಾರವಾದರೂ ಮಾಡಬೇಕಾಗಿ ಸ್ಥಳೀಯರ ಒತ್ತಾಯವಾಗಿದೆ.