ಮಡಿಕೇರಿ, ಜು. ೧: ಬೆಂಗಳೂರಿನ ಹೊಸಕೋಟೆ ತಿರುಮಲ ಹಳ್ಳಿಯ ಶ್ರೀ ಸಾಯಿ ಪಾಲೇಸ್‌ನಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಟೆಕ್ವಾಂಡೊ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿಯ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಎಂ.ವಿ. ಕಿಶನ್ ೨ ಚಿನ್ನ, ಬಾರನ ಎಸ್. ಬಿಂಬಿತ್ ೨ ಚಿನ್ನ, ಬಾರನ ಎಸ್. ಪ್ರೇಕ್ಷಿತ್ ೨ ಚಿನ್ನ, ಬಾರನ ಡಿ. ಚಿನ್ಮಯಿ ೨ ಚಿನ್ನ, ಜಿ.ಎಂ. ಮಿನ್‌ಶಾ ೧ ಚಿನ್ನ, ಅಮೃತ ಜಗದೀಶ್ ೧ ಚಿನ್ನ, ಪಿ.ಬಿ. ಶಿವ ೧ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಟೆರ್ಲಿಟ ಶಿಹ ಸೆಕ್ಯೂರ ೧ ಬೆಳ್ಳಿ, ಅನನ್ಯ ಜಗದೀಶ್ ೧ ಬೆಳ್ಳಿ, ಜಿ.ಎಂ. ಮನೀಶ್‌ನಾಥ್ ೧ ಬೆಳ್ಳಿ, ಶರತ್ ಕುಮಾರ್ ೧ ಬೆಳ್ಳಿ, ಎ. ಅಚಲ್ ೧ ಬೆಳ್ಳಿ, ಟಿ.ಪಿ. ಪೃತ್ವಿನ್ ೧ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.

ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ. ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.