ಸೋಮವಾರಪೇಟೆ, ಜೂ. ೩೦: ಅಕ್ರಮವಾಗಿ ಗೋವಿನ ಮಾಂಸವನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯನ್ನು ಬಂದಿದ್ದಾರೆ.

ನಿನ್ನೆ ದಿನ ಪಿರಿಯಾಪಟ್ಟಣದ ರತ್ನಗಿರಿ ನಿವಾಸಿ ಅಬ್ದುಲ್ ನಾಸಿರ್ ಎಂಬಾತ, ಸೋಮವಾರಪೇಟೆ ಸಮೀಪದ ಐಗೂರಿನ ಕಾಫಿ ತೋಟದಲ್ಲಿರುವ ಅಸ್ಸಾಮಿ ಕಾರ್ಮಿಕರಿಗೆ ಮಾರಲೆಂದು ತನ್ನ ಸ್ಕೂಟರ್‌ನಲ್ಲಿ ೧೦ ಕೆ.ಜಿ. ಗೋ ಮಾಂಸ ತರುತ್ತಿದ್ದ ಸಂದರ್ಭ ಐಗೂರಿನಲ್ಲಿ ಪೊಲೀಸರು ಬಂದಿಸಿದ್ದಾರೆ.

ಬAದಿತ ಆರೋಪಿಯಿಂದ ೧೦ ಕೆ.ಜಿ. ಗೋ ಮಾಂಸ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದ್ದು, ಅಬ್ದುಲ್ ನಾಸಿರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.