ವೀರಾಜಪೇಟೆ, ಜೂ. ೨೯: ಹಾಕಿ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಮತ್ತು ಅನುದಾನಗಳನ್ನು ಬಿಡುಗಡೆ ಮಾಡುವಂತೆ ಖೇಲೋ ಮಾಸ್ರ್ಸ್ ಗೆಮ್ ಹಾಕಿ ಫೇಡರೇಷನ್ ಕರ್ನಾಟಕ ಸಂಸ್ಥೆಯ ಕೊಡಗು ಜಿಲ್ಲಾ ಪದಾಧಿಕಾರಿಗಳು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಮನವಿ ಪತ್ರ ಸಲ್ಲಿಸಿತು.
ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿತು.
ಈ ಸಂದರ್ಭದಲ್ಲಿ ವಿಶ್ವ ಹಾಕಿ ತೀರ್ಪುಗಾರರು, ಕರ್ನಾಟಕ ಹಾಕಿ ಅಸೋಸಿಯೇಷನ್ ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯರು ಮತ್ತು ಖೇಲೋ ಮಾಸ್ರ್ಸ್ ಗೆಮ್ ಹಾಕಿ ಫೆಡರೇಷನ್ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷ ಅಮ್ಮಣಿಚಂಡ ಸಂಜು ಸೋಮಯ್ಯ ಮಾತನಾಡಿ, ಹಾಕಿ ಕ್ರೀಡೆಯಲ್ಲಿ ವಿಫುಲ ಅವಕಾಶಗಳಿದ್ದು, ಕಿರಿಯ ಹಿರಿಯ ಆಟಗಾರರಿಗೆ ಪ್ರೋತ್ಸಾಹ ನೀಡುವಂತಾಗಬೇಕು.
ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಶೇಷ ಅನುದಾನ ಮತ್ತು ಸೌಲಭ್ಯಗಳನ್ನು ಸರ್ಕಾರ ಒದಗಿಸುವಂತಾಗಬೇಕು ಎಂದು ಸಂಸ್ಥೆ ಹಾಗೂ ಕ್ರೀಡಾಪಟುಗಳ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿದರು.
ಮಾಸ್ರ್ಸ್ ಹಾಕಿ ಕರ್ನಾಟಕ ರಾಜ್ಯ ಮಹಿಳಾ ತಂಡದ ನಾಯಕಿ ಮಾಚಿಮಂಡ ದಮಯಂತಿ ಅಪ್ಪಯ್ಯ, ಆಟಗಾರ್ತಿಯರಾದ ಯಶೋಧ, ಮುಕ್ಕಾಟೀರ ಪ್ರವೀಣ, ಮೂಕಳೇರ ಮೀರಾ ಆಶೋಕ್, ಅರಮಣಮಾಡ ಶಕುನಾ ಅನಿಲ್ ಮತ್ತು ಅಮ್ಮಣಿಚಂಡ ತೇಜ ಸೋಮಯ್ಯ ಹಾಜರಿದ್ದರು.