ಮಡಿಕೇರಿ, ಜೂ. ೩೦ : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗಾಗಿ ತಾ. ೧೧ ರಿಂದ ೧೫ ರವರೆಗೆ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (ಐಪಿಆರ್) ಮತ್ತು ಎಂಟರ್‌ಪ್ರಿನರ್‌ಶಿಪ್ ಡೆವಲಪ್‌ಮೆಂಟ್’ ಕಾರ್ಯಾಗಾರವು ಅಕಾಡೆಮಿಯ ಕಚೇರಿಯಲ್ಲಿ (ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ. ಯು.ಆರ್.ರಾವ್ ವಿಜ್ಞಾನ ಭವನ, ಜಿಕೆವಿಕೆ ಆವರಣ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು ೫೬೦೦೯೭ ದೂ.ಸಂ.೦೮೦-೨೯೭೨೧೫೫೦) ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರತಿನಿಧಿಗಳು ತಾ. ೫ ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ವೆಬ್‌ಸೈಟ್ ತಿತಿತಿ.ಞsಣಚಿಛಿಚಿಜemಥಿ.iಟಿ ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ರಮೇಶ್ ತಿಳಿಸಿದ್ದಾರೆ.