ಮಡಿಕೇರಿ, ಜೂ. ೨೯: ೨೦೨೪ರ ಅಂತ್ಯದೊಳಗೆ ಕುಶಾಲನಗರ-ಮೈಸೂರು ೪ ಪಥದ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ಧವಾಗಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬAಧ
(ಮೊದಲ ಪುಟದಿಂದ) ಪ್ರಕ್ರಿಯೆಗಳು ಆರಂಭಗೊAಡಿವೆ. ‘ಡೋಸಿಂಗ್’ ಹಾಗೂ ‘ಮಾರ್ಕಿಂಗ್’ ಕೆಲಸಗಳೆಲ್ಲ ಆರಂಭಗೊAಡಿವೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊAಡು ಮುಗಿಯಲಿದೆ. ಭೂಸ್ವಾಧೀನದ ಸಂಬAಧದ ಕೆಲಸಗಳೆಲ್ಲ ಪೂರ್ಣಗೊಂಡಿವೆ. ರೂ. ೩೦೦ ಕೋಟಿ ಪರಿಹಾರ ನೀಡಿದರೆ ಭೂಸ್ವಾಧೀನವೂ ಮುಗಿಯುತ್ತದೆ ಎಂದು ಮಾಹಿತಿ ನೀಡಿದರು.
ಇದರೊಂದಿಗೆ ಮಡಿಕೇರಿಯಿಂದ ಸಂಪಾಜೆ ತನಕವೂ ೪ ಪಥ ಹೆದ್ದಾರಿಯಾಗುತ್ತದೆ. ಚನ್ನರಾಯ ಪಟ್ಟಣ - ಕೊಡ್ಲಿಪೇಟೆ- ಸೋಮವಾರಪೇಟೆ- ಕುಟ್ಟ ರಸ್ತೆಯನ್ನು ರಾಷ್ಟಿçÃಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗುತ್ತದೆ. ‘ಕ್ರಿಟಿಕಲ್ ಕೇರ್ ಸೆಂಟರ್’ಗೆ ರೂ. ೪೦ ಕೋಟಿ ಕೇಂದ್ರ ಅನುದಾನ ನೀಡಿದೆ. ಜಲಜೀವನ್ ಮಿಷನ್ ಅನುದಾನದಡಿ ಪ್ರತಿ ಮನೆಗೂ ನಲ್ಲಿ ನೀರು ಒದಗಿಸಿದ್ದೇವೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಆತ್ಮಸಾಕ್ಷಿಗೆ ತಕ್ಕಂತೆ ಮಾತನಾಡಬೇಕು. ೧೦ ಕೆಜಿ ಅಕ್ಕಿ ನೀಡಲು ಆಗದಿದ್ದಲ್ಲಿ ಘೋಷಿಸಿರುವ ಹಣವನ್ನಾದರೂ ನೀಡಿ. ೫ ಕೆ.ಜಿ. ಕೇಂದ್ರ ಸರಕಾರ ನೀಡುತ್ತಿದೆ ಎಂದು ಕಡೆಗಾದರೂ ಒಪ್ಪಿಕೊಂಡಿರುವುದಕ್ಕೆ ಧನ್ಯವಾದ. ಅನ್ನಭಾಗ್ಯ ‘ಬೋಗಸ್’ ಎಂದು ಈಗ ಬಯಲಾಗಿದೆ. ಆಹಾರ ಭದ್ರತಾ ಕಾಯ್ದೆ ನಾವು ತಂದಿದ್ದು ಎಂದು ಕಾಂಗ್ರೆಸ್ ಬೀಗುತಿತ್ತು. ೨೦೦೦ನೇ ಇಸವಿಯಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಪಂಚದಲ್ಲಿನ ಪಟ್ಟಿ ಮಾಡಿದಾಗ ಜಗತ್ತಿನ ೮ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ಹಸಿವು ಮತ್ತು ಪೌಷ್ಠಿಕಾಂಶ ಸೇರಿ ೮ ಅಂಶಗಳನ್ನು ಗುರುತಿಸಲಾಗಿತ್ತು. ೨೦೧೫ರ ಹೊತ್ತಿಗೆ ಇವೆಲ್ಲವನ್ನು ಪರಿಹರಿಸಬೇಕೆಂದು ನಿರ್ಧರಿಸಲಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತ್ಯೋದಯ ಅನ್ನ ಯೋಜನೆ ಜಾರಿ ಮಾಡಿ ಬಿಪಿಎಲ್ ಕಾರ್ಡ್ದಾರರಿಗೆ ಗೋದಿಗೆ ರೂ. ೨, ಅಕ್ಕಿಗೆ ರೂ. ೩ ರಂತೆ ನೀಡಲು ಆರಂಭಿಸಿತು. ೨೦೧೩ ರಲ್ಲಿ ಯುಪಿಎ ಸರಕಾರ ಗುರಿ ಮುಟ್ಟಬೇಕೆಂಬ ನಿಟ್ಟಿನಲ್ಲಿ ಇದಕ್ಕೆ ಕಾಯ್ದೆ ರೂಪ ನೀಡಿತು. ಅದಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ‘ಲೇಬಲ್’ ಹಾಕಿದೆ ಎಂದರು.
ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಜನರಿಗೆ ನೀಡಿ. ಮೋದಿ ವಿರುದ್ಧ ಬೊಟ್ಟು ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ ಅವರು, ಸರಕಾರ ಹೊರಡಿಸಿದ ಪತ್ರದಿಂದ ಕಾಂಗ್ರೆಸ್ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಜಗಜಾಹೀರಾಗಿದೆ. ಬಿಜೆಪಿ ವಿರುದ್ಧ ೪೦% ಸರಕಾರ ಎನ್ನುತ್ತಿದ್ದ ಕಾಂಗ್ರೆಸ್ ಅಂಗಡಿ ಇದೀಗ ತೆರೆದುಕೊಂಡಿದೆ ಎಂದು ಆರೋಪಿಸಿದರು.