ಮಡಿಕೇರಿ, ಜೂ. ೩೦ : ರಾಜ್ಯ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾಗಿ ಕೊಡಗು ಮೂಲದ ಐಎಎಸ್ ಅಧಿಕಾರಿಯಾಗಿರುವ ಬೊಳಂದAಡ ಬಿ. ಕಾವೇರಿ (ತಾಮನೆ - ಬಲ್ಟಿಕಾಳಂಡ) ಅವರು ಆಯ್ಕೆಯಾಗಿದ್ದಾರೆ. ಈತನಕ ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಈ ಹಿಂದೆ ಕಾವೇರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ಅವರ ಪುತ್ರಿಯಾಗಿರುವ ಕಾವೇರಿ ಅವರು ಮೂಲತಃ ಕಾರುಗುಂದದವರಾದ ಬೊಳಂದAಡ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.