ವೀರಾಜಪೇಟೆ, ಜೂ. ೩೦: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ತಾ. ೨ ರಂದು ವೀರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ತಿಳಿಸಿದ್ದಾರೆ.

ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆಯ ಎ-ಟು-ಜೆಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರೆಜಿತ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ. ಜಿಲ್ಲಾ ವೀಕ್ಷಕರಾಗಿ ಆನಂದ್ ಕೊಡಗು ಪಾಲ್ಗೊಳ್ಳಲಿದ್ದು, ಜಿಲ್ಲಾಧ್ಯಕ್ಷ ಬಿ.ಆರ್ ಸವಿತಾರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ರಾಜ್ಯ ಸಮಿತಿ ಸದಸ್ಯ ಟಿ.ಎನ್. ಮಂಜುನಾಥ್, ತಾಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್ ಭಾಗವಹಿಸಲಿದ್ದಾರೆ. ೧೧ ಗಂಟೆಗೆ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ದತ್ತಿ ಪ್ರಶಸ್ತಿ ಸ್ಥಾಪಿಸಿರುವ ವೀರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕÀ ಮಾದಂಡ ತಿಮ್ಮಯ್ಯ, ಸಿದ್ದಾಪುರದ ಸಮಾಜ ಸೇವಕ ಕೆ.ಯು ಅಬ್ದುಲ್ ಮಜೀದ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕೋಲತಂಡ ರಘು ಮಾಚಯ್ಯ, ಜಿಲ್ಲಾ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರತಿಭಾ ಪುರಸ್ಕಾರ: ಸದಸ್ಯರಾದ ಕೃಷ್ಣ ಅವರ ಮಕ್ಕಳಾದ ಜೀಶ್ಮ ಎಂ.ಕೆ, ಜಸ್ಮಿತಾ ಎಂ.ಕೆ, ರಜಿತ ಕಾರ್ಯಪ್ಪ ಅವರ ಮಗಳು ಕೆ.ಈಶಾನ್ವಿ, ಎ.ಎನ್ ವಾಸು ಅವರ ಪುತ್ರಿ ಸಮೃದ್ಧಿ ಎ.ವಿ, ಗಿರೀಶ್ ವಿ.ಕೆ ಅವರ ಪುತ್ರ ಅಗಿಲ್ ವಿ.ಜಿ, ಸುನಿಲ್ ಕೆ.ಎಸ್ ಅವರ ಪುತ್ರ ರೆನಿಲ್ ಕೆ.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ತಾಲೂಕು ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಸಂಘದ ಸದಸ್ಯರಾದ ಎ.ಎನ್ ವಾಸು, ರಜಿತಾ ಕಾರ್ಯಪ್ಪ, ಪುತ್ತಂ ಪ್ರದೀಪ್, ಆರ್. ಸುಬ್ರಮಣಿ ಮತ್ತು ಎಂ.ಎ. ಕೃಷ್ಣ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.