ಮಡಿಕೇರಿ, ಜೂ. ೩೦ : ಗಾಳಿಬೀಡು ಜವಾಹರ ನವೋದಯ ವಿದ್ಯಾಲಯ ವತಿಯಿಂದ ೨೦೨೩-೨೪ ನೇ ಸಾಲಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ವೈದ್ಯಕೀಯ ಶುಶ್ರೂಷಕಿ (ಸ್ಟಾಫ್ ನರ್ಸ್) ಹುದ್ದೆಗೆ ತಾ. ೫ ರಂದು ಬೆಳಿಗ್ಗೆ ೧೦ ರಿಂದ ನೇರ ಸಂದರ್ಶನ ನಡೆಯಲಿದೆ. ಸ್ಟಾಫ್ ನರ್ಸ್ ಹುದ್ದೆಯು ತಾತ್ಕಾಲಿಕವಾಗಿದ್ದು, ತಿಂಗಳಿಗೆ ರೂ. ೩೪,೧೨೫ ವೇತನ ನೀಡಲಾಗುತ್ತದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ತಾ. ೫ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨.೩೦ ಗಂಟೆವರೆಗೆ ಹಾಜರಾಗುವಂತೆ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ವಿದ್ಯಾಲಯದ ವೆಬ್‌ಸೈಟ್ ಟಿvsರಿಟಿv_ಞoಜಚಿgu ಹಾಗೂ ದೂ.ಸಂ.೯೪೪೭೩೬೮೪೭೦, ೯೩೮೦೮೦೨೧೭೯ ಸಂಪರ್ಕಿಸಬಹುದಾಗಿದೆ.