ಚೆಟ್ಟಳ್ಳಿ, ಜೂ. ೩೦ : ಚೆಟ್ಟಳ್ಳಿ-ಮಡಿಕೇರಿ ಮಧ್ಯದ ಮುಖ್ಯರಸ್ತೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದ್ದು ವಾಹನ ಸಂಚಾರ ಜುಲೈ ೧೦ರವರೆಗೂ ನಿಷೇಧವಿದ್ದರೂ ಲಘುವಾಹನಗಳು ನಿರಂತರವಾಗಿ ಸಂಚರಿಸುತ್ತಿದೆ.

ಕತ್ತಲೆಕಾಡುವಿನಿAದ ಅಬ್ಯಾಲದವರೆಗಿನ ೧.೫೦ ಮೀಟರ್ ವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯಲು ಜೂನ್ ೨೪ರಿಂದ ಜುಲೈ ೧೦ರವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ರಸ್ತೆಯ ಕಾಕ್ರೀಟ್ ಕಾಮಗಾರಿ ಮುಗಿದ ಮಾರನೇ ದಿನವೇ ವಾಹನ ಸಂಚಾರಗೊAಡು ಕೆಲವೆಡೆ ಕಾಮಗಾರಿ ಹಾಳಾಗಿವೆ.

ಈ ರಸ್ತೆಯಲ್ಲಿ ವಾಹನ ಸಂಚಾರವಾಗದAತೆ ಕತ್ತಲೆಕಾಡು ಹಾಗೂ ಚೆಟ್ಟಳ್ಳಿ ಪಟ್ಟಣದಲ್ಲಿ ಬ್ಯಾರಿಕೇಡ್ ಅಳವಡಿಸಿ ಪರ್ಯಾಯವಾಗಿ ಸುಂಟಿಕೊಪ್ಪ ಮಾರ್ಗವಾಗಿ ತೆರಳಲು ಸೂಚಿಸಲಾಗಿತ್ತು. ಆದರೆ ಕಳೆದ ಶನಿವಾರ ರಸ್ತೆಯ ಕಾಂಕ್ರೀಟ್ ಕಾಮಗಾರಿ ಮುಗಿದಿದ್ದು ಭಾನುವಾರವೇ ಬ್ಯಾರಿಕೇಡನ್ನು ತೆರವುಗೊಳಿಸಿ ವಾಹನಗಳು ಸಂಚರಿಸುತ್ತಿವೆ. ಇನ್ನು ಕೆಲವೆಡೆ ತಡೆಗೋಡೆ ಹಾಗೂ ಇತರೆ ಕಾಮಗಾರಿಗಳು ನಡೆಯಬೇಕಿವೆ. ವಾಹನ ತಡೆಯೊಡ್ಡಿದಾಗ ಪೊಲೀಸ್ ಸಿಬ್ಬಂದಿಗಳಿಗೂ ವಾಹನ ಸವಾರರಿಗೂ ಮಾತಿನ ಚಕಮಕಿ ಕೂಡ ನಡೆಯುತ್ತಿದೆ.

ರಸ್ತೆಯ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಸಿಬ್ಬಂದಿಗಳು ವಾಹನ ಸಂಚರಿಸದAತೆ ಎಚ್ಚರ ವಹಿಸಬೇಕಿದ್ದರೂ ರಸ್ತೆ ಕಾಮಗಾರಿ ನಡೆದ ನಂತರ ಗುತ್ತಿಗೆ ದಾರರಾಗಲಿ, ಇಂಜಿನಿಯರ್ ಇತ್ತಕಡೆ ಸುಳಿದಿಲ್ಲ. ರಸ್ತೆ ಹಾಳಾದರೆ ಯಾರು ಹೊಣೆ ಎನ್ನುತ್ತಾರೆ ಗ್ರಾಮಸ್ಥರು. ರಸ್ತೆ ಸಂಚಾರಕ್ಕೆ ತಡೆಯೊಡ್ಡಬೇಕೆ ಬೇಡವೇ ಎಂಬುದು ಪೊಲೀಸರಲ್ಲೂ ಗೊಂದಲವಿದೆ.

- ಕಾಳಯ್ಯ