ಕೂಡಿಗೆ, ಜೂ. ೩೦: ಪಶುಪಾಲನಾ ಇಲಾಖೆಯ ವತಿಯಿಂದ ಹಸುಗಳಿಗೆ ಕಾಣಿಸಿಕೊಳ್ಳುವ ಚರ್ಮಗಂಟು ರೋಗ ನಿರೋಧಕ ಶಕ್ತಿಯ ಲಸಿಕೆಯನ್ನು ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುದುಗೂರು ಮತ್ತು ಹೆಬ್ಬಾಲೆ ಪಶು ಆರೋಗ್ಯ ಕೇಂದ್ರದ ವತಿಯಿಂದ ನೀಡಲಾಗುತ್ತಿದೆ.
ಸಂಬAಧಿಸಿದ ಇಲಾಖೆಯವರು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಗ್ರಾಮದ ಹಸುಗಳಿಗೆ ಮುನ್ನೆಚ್ಚರಿಕೆಯಾಗಿ ಲಸಿಕೆಯನ್ನು ನೀಡುವ ಕ್ರಮಗಳನ್ನು ಕೈಗೊಂಡರು. ಪಶು ಪರಿವೀಕ್ಷಕಿ ಸುಜಾತ, ಸಹಾಯಕ ವಿನಯ್ ಸೇರಿದಂತೆ ರೈತರು ಹಾಜರಿದ್ದರು.