ವಿಶೇಷ ವರದಿ -ಚಂದ್ರಮೋಹನ್

ಕುಶಾಲನಗರ, ಜೂ. ೩೦ : ಕುಶಾಲನಗರ - ಮಡಿಕೇರಿ ರಸ್ತೆ ಹೆದ್ದಾರಿ ನಡುವೆ ವಾಹನಗಳ ಅಪಘಾತ ನಡೆದು ಜೀವಹಾನಿ ಹಾಗೂ ಗಾಯಾಳುಗಳ ಸಂಖ್ಯೆ ನಿತ್ಯ ಏರುತ್ತಿದ್ದು, ಅಪಾಯ ಹಾಗೂ ಆತಂಕಕಾರಿ ಬೆಳವಣಿಗೆ ಕಾಣಬಹುದು.

ಕಳೆದ ಕೆಲವು ಸಮಯಗಳಿಂದ ಮಡಿಕೇರಿ ಕುಶಾಲನಗರ ನಡುವೆ ೫೦ಕ್ಕೂ ಅಧಿಕ ವಾಹನ ಅಪಘಾತಗಳು ನಡೆದಿದ್ದು ಹತ್ತಕ್ಕೂ ಅಧಿಕ ಸಾವು ಹಾಗೂ ೨೫ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳು ಉಂಟಾದ ಬಗ್ಗೆ ದಾಖಲೆಗಳನ್ನು ಕಾಣಬಹುದು. ಮಡಿಕೇರಿ ಸಮೀಪ ಸ್ಯಾಂಡಲ್ ಕಾಡ್ ಬಳಿ ತಿರುವಿನಲ್ಲಿ ಆಗಾಗ್ಗೆ ನಡೆಯುತ್ತಿರುವ ಅಪಘಾತಗಳು, ಕುಶಾಲನಗರ ಸಮೀಪದ ಕೂಡಿಗೆ ರಸ್ತೆಯಲ್ಲಿ ನಡೆಯುತ್ತಿರುವ ಅಪಘಾತ ಪ್ರಕರಣಗಳು, ಇತ್ತೀಚೆಗೆ ಬೈಚನಹಳ್ಳಿ ಬಳಿ ನಡೆದ ದ್ವಿಚಕ್ರ ವಾಹನಗಳ ಅಪಘಾತ, ಆನೆಕಾಡು ಬಳಿ ನಡೆದಿರುವ ಅಪಘಾತ ಪ್ರಕರಣಗಳು, ಕೂಡುಮಂಗಳೂರು ಬಳಿ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತ, ಹೊಸಕೋಟೆ ಬಳಿ ನಡೆದ ಕಾರು ಅಪಘಾತ, ಕುಶಾಲನಗರ ತಾವರೆಕೆರೆ ಬಳಿ ನಡೆದ ಸರಣಿ ವಾಹನಗಳ ಅಪಘಾತ ಹೀಗೆ ನಿತ್ಯ ನಿರಂತರವಾಗಿ ಅಪಘಾತಗಳ ಬಗ್ಗೆ ವರದಿಗಳು ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪ್ರಮುಖವಾಗಿ ವಾಹನ ಚಾಲಕರ ನಿರ್ಲಕ್ಷö್ಯ, ಚಾಲನೆ ಸಂದರ್ಭ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ವೇಗವಾಗಿ ವಾಹನ ಚಾಲನೆ ಮತ್ತು ರಾತ್ರಿ ವೇಳೆ ನಿದ್ರಾವಸ್ಥೆಯಲ್ಲಿ ಮತ್ತು ಮದ್ಯದ ಮತ್ತಿನಲ್ಲಿ ವಾಹನಗಳ ಚಾಲನೆ ಪ್ರಕರಣಗಳೇ ಅಧಿಕವಾಗಿ ಕಂಡುಬರುತ್ತಿದ್ದು ಇದಕ್ಕೆ ಪರಿಹಾರ ಕಂಡಲ್ಲಿ ಮಾತ್ರ ಅಪಘಾತ ಮುಕ್ತ ರಸ್ತೆಯನ್ನು

(ಮೊದಲ ಪುಟದಿಂದ) ಕಾಣಲು ಸಾಧ್ಯ ಎನ್ನುತ್ತಾರೆ ಸಂಚಾರಿ ಪೊಲೀಸ್ ಅಧಿಕಾರಿಗಳು. ಇನ್ನೊಂದೆಡೆ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಸೇವನೆ ಮಾಡಿ ವಾಹನಗಳನ್ನು ಓಡಿಸುತ್ತಿರುವುದು ಕೂಡ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಇತ್ತೀಚೆಗೆ ಕುಶಾಲನಗರಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೊಡಗು ಜಿಲ್ಲೆಯ ಎಲ್ಲೆಡೆ ಅಪಘಾತ ಮುಕ್ತ ರಸ್ತೆಗಳನ್ನಾಗಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕಾನೂನು ನಿಯಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ತಡೆರಹಿತ ಹೆದ್ದಾರಿ ಆರಂಭಗೊAಡ ನಂತರ ಮೈಸೂರು-ಕುಶಾಲನಗರ -ಮಡಿಕೇರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕಗೊಂಡಿದೆ. ವಾರಾಂತ್ಯದಲ್ಲಿ ಹೆದ್ದಾರಿ ರಸ್ತೆ ಉದ್ದಕ್ಕೂ ವಾಹನಗಳ ಸಾಲುಗಳನ್ನು ಕಾಣಬಹುದು.

ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಮಡಿಕೇರಿ - ಕುಶಾಲನಗರ ನಡುವೆ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ಹೆದ್ದಾರಿ ರಸ್ತೆಯಲ್ಲಿ ಭಾರೀ ತಿರುವುಗಳಿವೆ.

ಕುಶಾಲನಗರ ಸಮೀಪ ತಾವರೆಕೆರೆ ಬಳಿ ರಸ್ತೆಯ ನಿರ್ವಹಣೆ ಕಾಮಗಾರಿ ನಡೆಯದೆ ಹಲವು ವರ್ಷಗಳು ಕಳೆದಿದ್ದು, ಈ ಭಾಗದಲ್ಲಿ ರಸ್ತೆಗಳಲ್ಲಿ ಭಾರೀ ಗಾತ್ರದ ಗುಂಡಿಗಳು ವಾಹನಗಳ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಇಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದ ರಸ್ತೆಯನ್ನು ಎತ್ತರಿಸಿ ಪ್ರವಾಹ ಮುಕ್ತ ಮಾಡುವ ಯೋಜನೆ ರಾಷ್ಟಿçÃಯ ಹೆದ್ದಾರಿ ಇಲಾಖೆಯಲ್ಲಿ ಪ್ರಸ್ತಾವನೆ ಇದ್ದರೂ ಅನುದಾನದ ಕೊರತೆಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆನೆಕಾಡು, ಬೋಯಿಕೇರಿ ಬಳಿ ತಿರುವುಗಳನ್ನು ಸರಿಪಡಿಸಲು ಕೂಡ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಷ್ಟಿçÃಯ ಹೆದ್ದಾರಿ ಉಪ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಇನ್ನಷ್ಟೇ ಬರಬೇಕಾಗಿದೆ ಎಂದು ರಾಷ್ಟಿçÃಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ತಿಳಿಸಿದ್ದಾರೆ.

ನಡೆಯಬೇಕಾಗಿದ್ದ ಹೆದ್ದಾರಿ ರಸ್ತೆಯ ನಿರ್ವಹಣೆ ಕಾಮಗಾರಿ ಕೂಡ ಇನ್ನೂ ಆರಂಭಗೊAಡಿಲ್ಲ. ಹೆದ್ದಾರಿ ರಸ್ತೆಯಲ್ಲಿ ಕಂಡು ಬರುತ್ತಿರುವ ರಸ್ತೆ ಗುಂಡಿಗಳು, ತಿರುವುಗಳು ವಾಹನ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದು ಈ ಬಗ್ಗೆ ತಕ್ಷಣ ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕುಶಾಲನಗರ ವಾಹನ ಚಾಲಕ ಅಣ್ಣಯ್ಯ ಆಗ್ರಹಿಸಿದ್ದಾರೆ.

ಮಡಿಕೇರಿ - ಕುಶಾಲನಗರದ ನಡುವೆ ಹೆದ್ದಾರಿ ರಸ್ತೆಯ ನಿರ್ವಹಣೆ ಕಾಮಗಾರಿಗೆ ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಉಪಯೋಗದ ಸಹಾಯಕ ಅಭಿಯಂತರ ನಾಗರಾಜ್ ಅವರನ್ನು ‘ಶಕ್ತಿ’ ಸಂಪರ್ಕಿಸಿದ ಸಂದರ್ಭ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.