ಸೋಮವಾರಪೇಟೆ, ಜೂ. ೨೯: ಸಮೀಪದ ಯಡೂರು ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜು ಮತ್ತು ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆಯ ಬಗ್ಗೆ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶು ಪಾಲ ಎಂ.ಎA. ರುದ್ರಕುಮಾರ್ ಉದ್ಘಾ ಟಿಸಿದರು. ನಂತರ ಮಾತನಾಡಿ, ಯಾವುದೇ ಪ್ರಾಕೃತಿಕ ವಿಪತ್ತುಗಳು ಮೊದಲೇ ಹೇಳಿ ಬರುವುದಿಲ್ಲ. ಅದು ಬಂದಾಗ ಎದುರಿಸಲು ನಾವು ಮೊದಲೇ ಸಿದ್ಧರಾಗಬೇಕಾಗಿದೆ. ೨೦೦೧ರ ನಂತರ ದೇಶದಲ್ಲಿ ಹಲವು ಪ್ರಾಕೃತಿಕ ವಿಕೋಪಗಳು ನಡೆದಿವೆ. ಸಾಕಷ್ಟು ಜೀವ ಹಾನಿಯಾಗಿದೆ. ಅದರಿಂದಾಗಬಹುದಾದ ಪರಿಣಾಮ ವನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಣ್ಣಾರೆ ಕಂಡಿದ್ದೇವೆ. ಆದುದರಿಂದ ಭವಿಷ್ಯದಲ್ಲಿ ನಡೆಯಬಹುದಾದ ಯಾವುದೇ ದುರ್ಘಟನೆಗಳನ್ನು ಎದುರಿಸಲು ಸರ್ಕಾರ, ಜಿಲ್ಲಾಡಳಿತ ಹಾಗೂ ಯುವ ಸಮೂಹ ಸಿದ್ಧರಿರಬೇಕೆಂದರು.
೨೦೧೮ ನಾವು ಮರೆಯಲಾಗದ ವರ್ಷವಾಗಿದೆ. ಕೇರಳ, ಕರ್ನಾಟಕ ಸೇರಿದಂತೆ ಹಲವೆಡೆ ಭಾರಿ ವರ್ಷಧಾ ರೆಯಿಂದ ಜನ ಜೀವನ ಅಸ್ತವ್ಯಸ್ತ ವಾಗಿತ್ತು. ಕೇರಳದ ಹೆಚ್ಚಿನ ಪ್ರದೇಶ ಗಳು ನೀರಿನಿಂದ ಮುಳುಗಿತ್ತು. ಹಲವು ಬೆಟ್ಟ ಗುಡ್ಡಗಳು ಕುಸಿದು ಸಾವಿರಾರು ಜನರು ಮನೆ ಮಠಗಳನ್ನು ಕಳೆದುಕೊಳ್ಳುವುದ ರೊಂದಿಗೆ, ಜೀವ ಹಾನಿಯೂ ಆಗಿತ್ತು. ಅದೇ ರೀತಿಯಲ್ಲಿ ಕೊಡಗಿ ನಲ್ಲೂ ಸಾಕಷ್ಟು ಕಷ್ಟ ನಷ್ಟವಾಗಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಮರೆಯಲು ಸಾಧ್ಯವಿಲ್ಲ ಎಂದರು.
ಮುAದಿನ ದಿನಗಳಲ್ಲಿ ಯಾವುದೇ ಪ್ರಾಕೃತಿಕ ಅನಾಹುತಗಳು ನಡೆದರೂ, ಅದರಿಂದಾಗುವ ನಷ್ಟವನ್ನು ಭರಿಸಿ ಕೊಳ್ಳಲು ಯುವ ಸಮೂಹ ಯೋಜನೆಗಳನ್ನು ಮಾಡಿಕೊಳ್ಳ ಬೇಕಿದೆ. ಯಾವುದೇ ಅನಾಹು ತಗಳಾದರೂ, ತಕ್ಷಣ ಯುವಜನರು ಸ್ಥಳಕ್ಕೆ ಧಾವಿಸಿ ಜನರ ನೆರವಿಗೆ ನಿಲ್ಲಬೇಕಿದೆ. ಜನರಲ್ಲಿ ಅನಾಹುತಗಳು ಮತ್ತು ಅದರಿಂದ ಪಾರಾಗುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾ ಗಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಧನಲಕ್ಷಿö್ಮÃ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಶಿವಮೂರ್ತಿ, ಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿಯ ಡಾ. ಕುಸುಮ ಮತ್ತು ಪಿ. ಪಾವನ ಇದ್ದರು.
ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆಯ ಬಗ್ಗೆ ನಡೆದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.