ಕೂಡಿಗೆ, ಜೂ. ೨೯: ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಸತ್ತು ತುಂಬ ಅಗತ್ಯ ಎಂದು ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ ಹೇಳಿದರು.

ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಾಲೆಗಳಲ್ಲಿ ಸಂಸತ್ತು ರಚನೆ ಮಾಡಿ ಶಿಸ್ತು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸ ಒಳ್ಳೆಯದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗಕ್ಕೆ ಮುಂದಾಗಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ಬೋಸ್ ಮೊಣ್ಣಪ್ಪ ಮಾತನಾಡಿ, ಸಂಸತ್ತು ರಚನೆ, ಅದರ ಕಾರ್ಯ ವೈಖರಿ ಮತ್ತು ಅಲ್ಲಿ ಸ್ವೀಕರಿಸುವ ನಿರ್ಣಯಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲೇ ಸರ್ಕಾರ ಹಾಗೂ ಮಂತ್ರಿ ಮಂಡಲ ಕುರಿತು ತಿಳಿದುಕೊಳ್ಳಬೇಕು. ಶಾಲೆಯ ವಿದ್ಯಾರ್ಥಿ ಸರ್ಕಾರದಲ್ಲಿ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ಅಮೇರಿಕದಲ್ಲಿರುವ ಡಾ. ಸತೀಶ್, ಆಶಾ ಸತೀಶ್ ಹಾಗೂ ನಂದಿನಿ ಬಾಲಚಂದ್ರ ಅವರು ನೀಡಿರುವ ಪ್ರೋತ್ಸಾಹ ಧನವನ್ನು ಅವರ ಸಂಬAಧಿ ವಿದ್ಯಾರ್ಥಿ ಸುರಕ್ಷಾ ಸಮಿತಿ ಅಧ್ಯಕ್ಷ ಮಂಜುನಾಥ್ ಅವರು ನೀಡಿ ಗೌರವಿಸಿದರು.

ಮುಖ್ಯ ಶಿಕ್ಷಕ ಸಿ.ದುರ್ಗೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪೋಷಕ ಪರಿಷತ್ತು ಅಧ್ಯಕ್ಷ ಎಸ್.ಕೆ. ದಿನೇಶ್, ಉಪಾಧ್ಯಕ್ಷ ಮನು, ಹಿರಿಯ ಶಿಕ್ಷಕಿ ಸುಲೋಚನಾ, ಶಿಕ್ಷಕರಾದ ಎ.ಪಿ. ಸೋಮಯ್ಯ, ಸುರೇಶ್, ರತನ್, ದೀಪು, ಪುಷ್ಪಾ, ಕುಸುಮ ಇದ್ದರು. ಪುಷ್ಪಾ ನಿರೂಪಿಸಿದರು. ಸೋಮಯ್ಯ ವಂದಿಸಿದರು. ವಿದ್ಯಾರ್ಥಿ ಮಂತ್ರಿಮAಡಲದ ಸದಸ್ಯರಿಗೆ ಮುಖ್ಯ ಶಿಕ್ಷಕ ಸಿ. ದುರ್ಗೇಶ್ ಪ್ರಮಾಣ ವಚನ ಬೋಧಿಸಿದರು.