ಸಿದ್ದಾಪುರ, ಜೂ. ೨೯: ಅಂರ್ರಾಷ್ಟಿçÃಯ ಮಾದಕ ವ್ಯಸನ ವಿರೋಧಿ ದಿನದ ಪ್ರಯುಕ್ತ, ಸಿದ್ದಾಪುರದ ಸೈಂಟ್ ಆ್ಯನ್ಸ್ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವತಿಯಿಂದ ಮಾದಕ ದ್ರವ್ಯಗಳಿಂದ ದೂರವಿರಿ ಹಾಗೂ ಮಾದಕ ವ್ಯಸನದಿಂದ ಉಂಟಾಗುವ ತೊಂದರೆಗಳ ಕುರಿತಾದ ನಾಮ ಫಲಕಗಳನ್ನು ಪ್ರದರ್ಶಿಸಿ ಸಿದ್ದಾಪುರದ ಮುಖ್ಯ ಬೀದಿಗಳಲ್ಲಿ ವಿವಿಧ ಘೋಷ ವಾಕ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.