ಮಡಿಕೇರಿ, ಜೂ. ೨೯: ಜಿಲ್ಲೆಯ ಮುಸ್ಲಿಂ ಸಮುದಾಯದವರು ಇಂದು ಜಿನುಗುತ್ತಿದ್ದ ಮಳೆಯ ನಡುವೆಯೇ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಮುಖ್ಯ ಮಸೀದಿಗಳಾದ ಜಾಮಿಯ, ಮಸ್ಜಿದ್ ಉರ್ರ‍್ರಹ್ಮಾ ಬದ್ರಿಯಾ, ಭಟ್ಕಳ್, ಎಮ್. ಎಮ್ . ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ ಹಬ್ಬದ ವಿಶೇಷ ನಮಾಜ್ ಚೆಟ್ಟಳ್ಳಿ: ಸಮೀಪದ ಕಂಡಕರೆ ಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಪವಿತ್ರ ಹಬ್ಬವಾದ ಬಕ್ರೀದ್ ಸಂಭ್ರಮದಿAದ ಆಚರಿಸಿದರು.
ಬಕ್ರೀದ್ ನಮಾಜ್ ನೇತೃತ್ವ ವಹಿಸಿ ಮಾತನಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಬಕ್ರೀದ್ ಹಬ್ಬವು ಇಡೀ ಪ್ರಪಂಚಕ್ಕೆ ತ್ಯಾಗ ಮತ್ತು ಬಲಿದಾನ ಸಂಕೇತವನ್ನು ಸಾರುತ್ತದೆ. ಬಕ್ರೀದ್ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಬೇಕು.
ಹಬ್ಬದ ಸಂಭ್ರಮದಲ್ಲಿ ಬಡವರಿಗೆ ಸಹಾಯ ಹಸ್ತ ಚಾಚುವ ಮೂಲಕ ಬಕ್ರೀದ್ ಸಂದೇಶವನ್ನು ಎಲ್ಲರೂ ಎತ್ತಿ ಹಿಡಿಯಬೇಕಾಗಿದೆ. ಇಂದಿನ ದಿನಗಳಲ್ಲಿ ಯುವ ಸಮೂಹ ಆಡಂಬರದ ಜೀವನ ದಿಂದ ದುಶ್ಚಟಗಳಿಗೆ ಬಲಿಯಾಗುತ್ತಿ ರುವುದು ಖೇದಕರ ಸಂಗತಿಯಾಗಿದೆ. ಹಬ್ಬದ ಸಂಭ್ರಮದ ನೆಪದಲ್ಲಿ ಯುವ ಸಮೂಹ ಮದ್ಯಪಾನಕ್ಕೆ ದಾಸರಾಗಬಾರದು. ದುಶ್ಚಟಗಳಿಂದ ಎಲ್ಲರೂ ದೂರವಿರಬೇಕಾಗಿದೆ. ಮದ್ಯಮುಕ್ತ ಸಮಾಜವನ್ನು ನಿರ್ಮಿಸಲು ಪಣತೊಡಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಂಡಕರೆ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಕುರ್ ಆನ್ ಕಂಠಪಾಠ ಮಾಡಿದ ಕಂಡಕರೆ ಲುಕ್ ಮಾನುಲ್ ಹಕೀಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈದ್ ನಮಾಜಿನ ಬಳಿಕ, ಇತ್ತೀಚೆಗೆ ನಿಧನರಾದ ಊರಿನ ಹಿರಿಯರು ಹಾಗೂ ಕಿರಿಯರಿಗಾಗಿ ಮುಸ್ತಫಾ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಬಕ್ರೀದ್ ಶುಭಕೋರಿದರು.
(ಮೊದಲ ಪುಟದಿಂದ)
ಸೋಮವಾರಪೇಟೆ: ತ್ಯಾಗ ಬಲಿದಾನದ ಸಂಕೇತವಾಗಿ ಮುಸ್ಲಿಂ ಸಮುದಾಯ ಆಚರಿಸುವ ಬಕ್ರೀದ್ ಹಬ್ಬವನ್ನು ಸೋಮವಾರಪೇಟೆ ಯಾದ್ಯಂತ ಸಂಭ್ರಮದಿAದ ಆಚರಿಸಲಾಯಿತು.
ಬೆಳಿಗ್ಗೆಯೇ ಮದರಸಾಗಳಿಗೆ ತೆರಳಿದ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ನಂತರ ಖಬರಸ್ಥಾನ ಗಳಿಗೆ ಅಗಲಿದ ಮಂದಿಗೆ ಶಾಂತಿ ಕೋರಿ ಪ್ರಾರ್ಥಿಸಿದರು. ಬಂಧುಗಳು, ಸ್ನೇಹಿತರ ಮನೆಗಳಿಗೆ ತೆರಳಿ ಬಕ್ರೀದ್ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಸಮೀಪದ ಕಲ್ಕಂದೂರು ಜುಮಾ ಮಸೀದಿಯಲ್ಲಿ ಖತೀಬರಾದ ಹಸೈನಾರ್ ಮದನಿ ಉಸ್ತಾದ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಖಬರಸ್ಥಾನದಲ್ಲಿ ಝಿಯಾರತ್ ಪ್ರಾರ್ಥನೆ ನೆರವೇರಿತು. ಪ್ರಮುಖರಾದ ತಾಜುದ್ದೀನ್ ಉಸ್ತಾದ್ ಸೇರಿದಂತೆ ಜಮಾತ್ ಸದಸ್ಯರು ಭಾಗಿಯಾಗಿದ್ದರು.
ಹೊಸತೋಟ ಜಾಮಿಯಾ ಸ್ನೇಹಿತರ ಮನೆಗಳಿಗೆ ತೆರಳಿ ಬಕ್ರೀದ್ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಸಮೀಪದ ಕಲ್ಕಂದೂರು ಜುಮಾ ಮಸೀದಿಯಲ್ಲಿ ಖತೀಬರಾದ ಹಸೈನಾರ್ ಮದನಿ ಉಸ್ತಾದ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಖಬರಸ್ಥಾನದಲ್ಲಿ ಝಿಯಾರತ್ ಪ್ರಾರ್ಥನೆ ನೆರವೇರಿತು. ಪ್ರಮುಖರಾದ ತಾಜುದ್ದೀನ್ ಉಸ್ತಾದ್ ಸೇರಿದಂತೆ ಜಮಾತ್ ಸದಸ್ಯರು ಭಾಗಿಯಾಗಿದ್ದರು.
ಹೊಸತೋಟ ಜಾಮಿಯಾ ಮಾದಾಪುರದ ಮೊಯಿದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಮಸೀದಿಯಲ್ಲಿ ಖತೀಬರಾದ ಅಬ್ದುಲ್ ರಹಮಾನ್ ಸಅದಿ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ನಂತರ ಮಾದಾಪುರ ಪಟ್ಟಣದ ಮಾರ್ಗವಾಗಿ ಮುಸ್ಲಿಂ ಸಮುದಾಯದವರು ಖಬರಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜಮಾತ್ ಅಧ್ಯಕ್ಷ ಎ.ಪಿ. ಅಕ್ಬರ್, ಉಪಾಧ್ಯಕ್ಷ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ ಎಂ.ಎ. ಮಜೀದ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು.
ಕುಶಾಲನಗರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಶಾಫಿ ಹಾಗೂ ಹನಫಿ ಪಂಗಡದ ಮುಸಲ್ಮಾನ ಸಮುದಾಯ ಅವರು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸಿದರು.
ಬಕ್ರೀದ್ ಮುಸಲ್ಮಾನರ ಪ್ರಮುಖ ಹಬ್ಬವಾಗಿದ್ದು, ಈ ಬಾರಿ ಬಕ್ರೀದ್ ಹಬ್ಬವನ್ನು ಶಾಫಿ ಹಾಗೂ ಹನಫಿ ಪಂಗಡದವರು ಒಂದೇ ದಿನ ಆಚರಿಸಿದ್ದು ಕಂಡು ಬಂತು. ಮಸೀದಿಗೆ ತೆರಳಿ ಬಕ್ರೀದ್ ಹಬ್ಬದ ನಮಾಜನ್ನು ನೆರವೇರಿಸಿದರು. ಹಬ್ಬದ ಪ್ರಾಮುಖ್ಯತೆ ಕುರಿತು ಮಸೀದಿಯ ಧರ್ಮಗುರುಗಳಿಂದ ಬೋಧನೆ ನಡೆಯಿತು. ಕುಶಾಲನಗರದ ಹಿಲಾಲ್ ಮಸೀದಿ, ತಕ್ವಾ ಮಸೀದಿ, ಜಾಮಿಯಾ ಮಸೀದಿ ಸೇರಿದಂತೆ ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣದ ಮಸೀದಿಯಲ್ಲಿ ಬಕ್ರೀದ್ ಹಬ್ಬದ ವಿಶೇಷವಾದ ನಮಾಜ್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಬಾಂಧವರು ಮಾಡಿಕೊಂಡರು. ಬಕ್ರೀದ್ ವಿಶೇಷವಾದ ದಿನವಾದ ಹಿನ್ನಲೆ ತಮ್ಮ ಕುಟುಂಬದಲ್ಲಿ ಮರಣ ಹೊಂದಿದವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಹಿಲಾಲ್ ಮಸೀದಿಯ, ಜಾಮಿಯ ಮಸೀದಿಗಳ ಧರ್ಮ ಗುರುಗಳ ನೇತೃತ್ವದಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ ನಡೆಯಿತು. ಧರ್ಮ ಗುರುಗಳು ಶುಭಾಶಯ ಕೋರಿದರು.
ವರಿಷ್ಠಾಧಿಕಾರಿ ಭೇಟಿ
ಬಕ್ರೀದ್ ಆಚರಣೆ ಸಂದರ್ಭ ಶಾಂತಿ, ಸುವ್ಯವಸ್ಥೆ ಬಗ್ಗೆ ಪರಿಶೀಲನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕುಶಾಲನಗರಕ್ಕೆ ಬೆಳಿಗ್ಗೆ ಭೇಟಿ ನೀಡಿ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ಇದ್ದರು.