ಮಡಿಕೇರಿ, ಜೂ. ೨೮: ಪ್ರಸ್ತುತ ಜೂನ್ ತಿಂಗಳು ಕೊನೆಗೊಳ್ಳುತ್ತಿದ್ದು, ಈ ಬಾರಿ ಈ ತನಕ ಮುಂಗಾರು ಮಳೆ ಜಿಲ್ಲೆಯಲ್ಲಿ ಕ್ಷೀಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ಸುಮಾರು ೧೪.೩೪ ಇಂಚಿನಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ೨೫.೯೨ ಇಂಚು ಮಳೆಯಾಗಿದ್ದರೆ ಈ ಬಾರಿ ೧೧.೫೮ ಇಂಚು ಮಾತ್ರ ದಾಖಲಾಗಿದೆ.
ಮಡಿಕೇರಿ ತಾಲೂಕಿನಲ್ಲೂ ಈ ವರ್ಷ ೧೭.೩೨ ಇಂಚಿನಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿನಲ್ಲಿ ೩೫.೧೭ ಇಂಚು ಮಳೆಯಾಗಿದ್ದರೆ, ಈ ವರ್ಷ ೧೭.೮೫ ಇಂಚು ದಾಖಲಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಯೂ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ೧೪.೫೮ ಇಂಚಿನಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕ ತಾಲೂಕಿನಲ್ಲಿ ೨೩.೨೫ ಇಂಚು ಮಳೆಯಾಗಿದ್ದರೆ ಈ ಬಾರಿ ೮.೬೬ ಇಂಚು ಮಾತ್ರ ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಯೂ ೧೦.೮೨ ಇಂಚು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ಜನವರಿಯಿಂದ ಈ ತನಕ ೧೯.೩೫ ಇಂಚು ಮಳೆ ಸುರಿದಿತ್ತು. ಈ ಬಾರಿ ಪ್ರಮಾಣ ೮.೫೩ ಇಂಚು ಮಾತ್ರವಾಗಿದೆ.
ಜಿಲ್ಲೆಯಲ್ಲಿ ತಾ. ೨೭ ರಂದು ಅಲ್ಲಲ್ಲಿ ಒಂದಷ್ಟು ಮಳೆಯಾಗಿದೆ. ಜಿಲ್ಲಾ ಸರಾಸರಿ ೦.೮೫ ಇಂಚು, ಮಡಿಕೇರಿ ತಾಲೂಕಿನಲ್ಲಿ ೧.೫೫, ವೀರಾಜಪೇಟೆ ಯಲ್ಲಿ ೦.೭೩ ಹಾಗೂ ಸೋಮವಾರಪೇಟೆಯಲ್ಲಿ ೦.೨೬ ಇಂಚು ಮಳೆಯಾಗಿದೆ. ನಾಪೋಕ್ಲು ಹೋಬಳಿಯಲ್ಲಿ ೨.೨೪, ಭಾಗಮಂಡಲ ೨.೧೫, ಸಂಪಾಜೆ ೧.೩೦, ವೀರಾಜಪೇಟೆ ಕ.ಸ.ಬಾ ೧.೬೪, ಹುದಿಕೇರಿ ಹೋಬಳಿಯಲ್ಲಿ ೦.೮೬ ಇಂಚಿನಷ್ಟು ಮಳೆ ಬಿದ್ದಿರುವ ಕುರಿತು ವರದಿ ಯಾಗಿದೆ. ಇತರ ಹೋಬಳಿಗಳಲ್ಲಿ ಮಳೆ ಪ್ರಮಾಣ ಕಡಿಮೆ ಕಂಡು ಬಂದಿತ್ತು.