ಸೋಮವಾರಪೇಟೆ, ಜೂ. ೨೭: ‘ಅನುಬಂಧ ಸ್ನೇಹ ಸಂಬAಧಗಳ ದರ್ಶನ’ ಶೀರ್ಷಿಕೆಯಡಿಯಲ್ಲಿ ಬೀರೂರಿನಲ್ಲಿ ಜರುಗಿದ ಜೆಸಿಐ ವಲಯ ೧೪ ರ ಅರ್ಧವಾರ್ಷಿಕ ಸಮ್ಮೇಳನ-೨೦೨೩ ರಲ್ಲಿ ಕಳೆದ ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ಭಾರತ ನೀಡುವ ಮಾರ್ಗದರ್ಶನ ದಂತೆ ಘಟಕಗಳಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಬಂದಿರುವ ಸೋಮವಾರಪೇಟೆ ಜೇಸೀ ಸಂಸ್ಥೆಗೆ ಪ್ರಶಸ್ತಿಗಳು ಲಭಿಸಿದ್ದು, ಅಧ್ಯಕ್ಷೆ ಎಂ.ಎ. ರುಬೀನಾ ಅವರಿಗೆ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಅಧ್ಯಕ್ಷೆ ರುಬೀನಾ ಎಂ.ಎ. ಇವರಿಗೆ ವಲಯ ಅಧ್ಯಕ್ಷರಾದ ಯಶಸ್ವಿನಿ, ವಲಯ ಉಪಾಧ್ಯಕ್ಷ ಪ್ರಶಾಂತ್ ಹೆಚ್.ಆರ್. ಗೋಲ್ಡನ್ ಕಾಲರ್ ಹಾಕುವ ಮೂಲಕ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಅವಾರ್ಡ್ ನೀಡಿ ಗೌರವಿಸಿದರು.

ಇದರ ಜೊತೆಗೆ ಔಟ್ ಸ್ಟಾö್ಯಂಡಿAಗ್ ಲಾಮ್ ವಿನ್ನರ್, ಔಟ್ ಸ್ಟಾö್ಯಂಡಿAಗ್ ಫರ್ಫಾರ್ಮರ್ ಪಿ.ಆರ್. ಅಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್ ಜೆಸಿಐನಲ್ಲಿ ವಿನ್ನರ್, ಗೋ ಗ್ರೀನ್, ಮ್ಯಾನೇಜ್ ಮೆಂಟ್ ಏರಿಯ, ಪ್ರೋಗ್ರಾಂ ಏರಿಯ ಮತ್ತು ಗೋ ಗ್ರೀನ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿಗಳನ್ನು ಘಟಕಕ್ಕೆ ನೀಡಲಾಯಿತು.

ಪುಷ್ಪಗಿರಿ ಘಟಕದಿಂದ ಜೆಸಿ ಮಮತ, ಪ್ರಕಾಶ್ ಕೆ.ಎ., ಮಾಯಾಗಿರೀಶ್, ಕಾರ್ಯದರ್ಶಿ ಜಗದಾಂಭ, ಜಿತೇಶ್, ದಿಶಾ ಅವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.