ವೀರಾಜಪೇಟೆ, ಜೂ. ೨೭: ಬಿಟ್ಟಂಗಾಲ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯನ್ನು ಯೋಜನೆಯ ಸೇವಾ ಕೇಂದ್ರದಲ್ಲಿ ನಡೆಸಲಾಯಿತು.
ಸಭೆಯಲ್ಲಿ, ಮಳೆಗಾಲದಲ್ಲಿ ಸಂಭವಿಸುವ ವಿಪತ್ತುಗಳಿಗೆ ಎಲ್ಲರೂ ಸನ್ನದ್ಧರಾಗಿರುವಂತೆ ತೀರ್ಮಾನಿಸಲಾಯಿತು. ಆದಷ್ಟು ಕೈಲಾದ ಸೇವೆ ವೈಯಕ್ತಿಕ ಸೇವೆಯನ್ನು ಮಾಡಿ ವರದಿ ಮಾಡುವಂತೆ, ಶಾಲಾ ಮಕ್ಕಳಿಗೆ ಜನಜಾಗೃತಿ ಕಾರ್ಯಕ್ರಮ, ಹಮ್ಮಿಕೊಳ್ಳುವ ಕುರಿತು ಚರ್ಚೆ ಮಾಡಲಾಯಿತು. ಜುಲೈ ೨ ಕ್ಕೆ ಸ್ವಚ್ಛತಾ ಕಾರ್ಯಕ್ರಮ ನಡೆಸುವುದು. ವೀರಾಜಪೇಟೆ, ಅಕ್ಕಚಮ್ಮನ ಕೆರೆಯ ಸುತ್ತಮುತ್ತ ಗಿಡ ನಾಟಿ ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ವಲಯ ಮೇಲ್ವಿಚಾರಕ ನಾಗರಾಜ್, ಸಂಯೋಜಕಿ ರೇಖಾ ಗಣೇಶ್, ರಂಜನ್, ಅರುಣ, ಯೋಗೀಶ್ ಮೋಹನ್, ಅಕ್ಷತ್ ಚಂಗಪ್ಪ, ಜೀವನ್, ಸಬಿತ ಹಾಜರಿದ್ದರು.