ಶನಿವಾರಸಂತೆ, ಜೂ. ೨೭: ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಾಥ ಮಿಕ-ಪ್ರೌಢಶಾಲಾ ವಿಭಾ ಗದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರು ಯುವ ಸಂಸತ್ ರಚನೆ, ಚುನಾವಣಾ ಪ್ರಕ್ರಿಯೆ, ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಚುನಾವಣೆ ನಡೆಸಿದರು.

ಈ ಸಂದರ್ಭ ಮುಖ್ಯಶಿಕ್ಷಕ ಉಲ್ಲಾಸ್ ಮಾತನಾಡಿ ಮತದಾನ ಮಹತ್ವ ತಿಳಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ನಾಯಕ, ಕ್ರೀಡಾ ಮಂತ್ರಿ, ಸಾಂಸ್ಕೃತಿಕ ಮಂತ್ರಿ, ಆರೋಗ್ಯಮಂತ್ರಿ, ಇತರ ಪ್ರಮುಖ ಸ್ಥಾನಗಳಿಗೆ ಆಸಕ್ತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತದಾನ ಮಾಡಿ ಶಿಕ್ಷಕರ ಸಹಭಾಗಿತ್ವದಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದರು.