ಸಿದ್ದಾಪುರ, ಜೂ. ೨೭: ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಯಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾ ವಣೆಯಾಗಿರುವ ಠಾಣಾಧಿಕಾರಿ ಗಳಾದ ಪಿ ಮೋಹನ್ ರಾಜ್, ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಮಲ್ಲಪ್ಪ ಮುಷಿಗೆರಿ, ವಸಂತ ಕುಮಾರ್ ಹಾಗೂ ಸಹಾಯಕ ಠಾಣಾಧಿಕಾರಿಯಾಗಿ ಮುಂಬಡ್ತಿ ಹೊಂದಿದ ಚಾಲಕ ಗೋವರ್ಧನ್ ಅವರನ್ನು ಸಿದ್ದಾಪುರ ಠಾಣಾ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಠಾಣಾಧಿಕಾರಿ ರಾಘವೇಂದ್ರ, ಸಹಾಯಕ ಠಾಣಾಧಿಕಾರಿಗಳಾದ ತಮ್ಮಯ್ಯ, ಸಿಬ್ಬಂದಿಗಳಾದ ಲಕ್ಷಿö್ಮÃ ಕಾಂತ್ ಇನ್ನಿತರರು ಹಾಜರಿದ್ದರು.