ಮಾನಸಿಕ ಆರೋಗ್ಯಕ್ಕೆ ಪ್ರಯೋಜನ
ಅಂರ‍್ರಾಷ್ಟಿçÃಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ ೨೧ ರಂದು ಆಚರಿಸಲಾಗುತ್ತದೆ. ಅಂರ‍್ರಾಷ್ಟಿçÃಯ ಯೋಗ ದಿನವನ್ನು ಆಚರಿಸುವ ಕಲ್ಪನೆಯನ್ನು ಮೊದಲು ನೀಡಿದವರು ಭಾರತದ ಪ್ರಧಾನಿ ನರೇಂದ್ರ ಮೋದಿ.
ಯೋಗವು ಮನಸ್ಸು, ದೇಹ ಮತ್ತು ಏಕತೆಯನ್ನು ಶಕ್ತಗೊಳಿಸುತ್ತದೆ. ಯೋಗದ ವಿವಿಧ ರೂಪಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
- ಎಂ.ಎA. ಕೇಶವ, ೫ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ. ಮೊ. ೯೫೩೫೦೭೧೧೫೭.ಮಾನಸಿಕ ಆರೋಗ್ಯಕ್ಕೆ ಪ್ರಯೋಜನ
ಅಂರ‍್ರಾಷ್ಟಿçÃಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ ೨೧ ರಂದು ಆಚರಿಸಲಾಗುತ್ತದೆ. ಅಂರ‍್ರಾಷ್ಟಿçÃಯ ಯೋಗ ದಿನವನ್ನು ಆಚರಿಸುವ ಕಲ್ಪನೆಯನ್ನು ಮೊದಲು ನೀಡಿದವರು ಭಾರತದ ಪ್ರಧಾನಿ ನರೇಂದ್ರ ಮೋದಿ.
ಯೋಗವು ಮನಸ್ಸು, ದೇಹ ಮತ್ತು ಏಕತೆಯನ್ನು ಶಕ್ತಗೊಳಿಸುತ್ತದೆ. ಯೋಗದ ವಿವಿಧ ರೂಪಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
- ಎಂ.ಎA. ಕೇಶವ, ೫ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ. ಮೊ. ೯೫೩೫೦೭೧೧೫೭.ಯೋಗ ಮಾಡಿ ಆರೋಗ್ಯವಾಗಿರಿ
ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ದೈಹಿಕ ಮತ್ತು ಮಾನಸಿಕ ಶಿಸ್ತಿನ ಸಮತೋಲನವನ್ನು ಸೃಷ್ಟಿಸುತ್ತದೆ. ಯೋಗ ಸಾವಿರಾರು ವರ್ಷಗಳ ಹಿಂದೆ ಭಾರತೀಯ ಸಮಾಜದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಂದಿನಿAದ ನಿರಂತರವಾಗಿ ಅಭ್ಯಾಸದ ಪ್ರಾಚೀನ ರೂಪ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುವ ಧ್ಯಾನ. ಪ್ರಪಂಚದ ಸುಮಾರು ೨ ಬಿಲಿಯನ್ ಜನರು ಯೋಗವನ್ನು ಅಭ್ಯಾಸ ಮಾಡುತ್ತಾರೆ.
- ಪಿ.ಪಿ. ಜನ್ಯ, ೫ನೇ ತರಗತಿ, ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ. ಮೊ. ೯೪೪೯೯೩೩೦೫೬.ದೇಹ ಸದೃಢವಾಗಿರಲು ಸಹಕಾರಿ
ಯೋಗ ಎನ್ನುವುದು ಮನಸ್ಸು ಹಾಗೂ ದೇಹವನ್ನು ಸದೃಢವಾಗಿಡಲು ನಿತ್ಯವೂ ಮಾಡುವಂತಹ ವ್ಯಾಯಾಮ. ಹಿಂದಿನಿAದಲೂ ಭಾರತದಲ್ಲಿ ಋಷಿ ಮುನಿಗಳು ಯೋಗ ದಿಂದಲೇ ತಮ್ಮ ಸಾಧನೆ ಮಾಡುತ್ತಿದ್ದರು. ಯೋಗವು ಮನಸ್ಸನ್ನು ಹತೋಟಿ ಯಲ್ಲಿಡುವ ಜೊತೆಗೆ ದೇಹವನ್ನು ಸದೃಢವಾಗಿಸಲು ಸಹಕಾರಿಯಾಗಿದೆ.
- ಡಿ.ಕೆ. ಚಲನ, ೮ನೇ ತರಗತಿ, ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ.
(ಮುಂದವರಿಯುವುದು)
ಜಿಲ್ಲೆಯ ವಿವಿಧೆಡೆ ಯೋಗ ದಿನಾಚರಣೆ
ಮಡಿಕೇರಿ, ಜೂ. ೨೭: ೯ನೇ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು. ಸಂಘ-ಸAಸ್ಥೆ,
ಶಾಲಾ-ಕಾಲೇಜುಗಳಲ್ಲಿ ಯೋಗ ಮಾಡಿ ಸಾರ್ವಜನಿಕರು, ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಯೋಗ ದಿನಾಚರಣೆಯನ್ನು ಆಚರಿಸಿದರು.
ಮುಳ್ಳೂರು: ಪಟ್ಟಣದ ಭಾರತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿವಿಧ ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು.
ಯೋಗಭ್ಯಾಸವನ್ನು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಆದರ್ಶ ನಡೆಸಿಕೊಟ್ಟರು. ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಇ.ಎಂ. ದಯಾನಂದ್ ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.ಮಡಿಕೇರಿ: ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ೯ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್.ಪಿ. ಪಾಲಾಕ್ಷ ಹಾಗೂ ವಿಜ್ಞಾನ ಸಹಶಿಕ್ಷಕಿ ಅಶ್ವಿನಿ ಪ್ರಾಣಾಯಾಮ ಮತ್ತು ಯೋಗದ ಹಲವು ಆಸನಗಳನ್ನು ಪ್ರದರ್ಶಿಸಿ ಯೋಗದ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್.ಪಿ. ಪಾಲಾಕ್ಷ ಹಾಗೂ ವಿಜ್ಞಾನ ಸಹಶಿಕ್ಷಕಿ ಅಶ್ವಿನಿ ಪ್ರಾಣಾಯಾಮ ಮತ್ತು ಯೋಗದ ಹಲವು ಆಸನಗಳನ್ನು ಪ್ರದರ್ಶಿಸಿ ಯೋಗದ ಪ್ರಾಮುಖ್ಯತೆಗಳನ್ನು ತಿಳಿಸಿದರು.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ವೀರಾಜಪೇಟೆ: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾ ಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಆಯುರ್ವೇದ ವಿಭಾಗದ ತಜ್ಞವೈದ್ಯ ಡಾ. ರವಿಕುಮಾರ್ ಯೋಗದ ಮಹತ್ವವನ್ನು ತಿಳಿಸುವುದರ ಜೊತೆಗೆ ಅಷ್ಟಾಂಗ ಯೋಗ, ಅದರ ಮಹತ್ವವನ್ನು ವಿವರಿಸಿ, ಭಾರತದಲ್ಲಿ ಯೋಗ ಅನಾಧಿ ಕಾಲದಿಂದಲೂ ಹೇಗೆ ವ್ಯಾಪಿಸಿತ್ತು ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ವಾಣಿಯವರು ಸಾಂದರ್ಭಿಕ ಉದಾಹರಣೆಯೊಂದಿಗೆ ಯೋಗದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿ, ಶಿಕ್ಷಕರು ಯೋಗದ ಪ್ರಾತ್ಯಕ್ಷಿಕೆಯನ್ನು ನೀಡಿದರು. ವಿದ್ಯಾರ್ಥಿ ಶಿಕ್ಷಕ ಹರ್ಷವರ್ಧನ್ ಯೋಗದ ಬಗ್ಗೆ ನೀಡಿದ ಪವರ್ ಪಾಯಿಂಟ್ ಪ್ರಸ್ತುತಿ ಅರ್ಥಪೂರ್ಣವಾಗಿತ್ತು.
ಯೋಗ ಶಿಕ್ಷಕ ಉಮೇಶ್ ಯೋಗದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರಸಕ್ತ ಸಮಾಜದಲ್ಲಿ ಯೋಗದ ಅನಿವಾರ್ಯತೆಯನ್ನು ಬಣ್ಣಿಸಿದರು. ವಿದ್ಯಾರ್ಥಿ ಶಿಕ್ಷಕ ಶಿವಾನಂದ್ ಯೋಗದ ಮಹತ್ವವನ್ನು ತನ್ನ ಭಾಷಣದಲ್ಲಿ ವಿವರಿಸಿದರು. ಕಾರ್ಯಕ್ರಮವು ವಿದ್ಯಾರ್ಥಿ ಶಿಕ್ಷಕಿ ಲೀನಾ ಹಾಗೂ ಧನ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊAಡು, ವಿದ್ಯಾರ್ಥಿ ಶಿಕ್ಷಕಿ ಶಮೀನಾ ಅವರ ಸ್ವಾಗತದೊಂದಿಗೆ ಮುಂದುವರೆದು, ವಿದ್ಯಾರ್ಥಿ ಶಿಕ್ಷಕಿ ರಶ್ಮಿತ ಅವರ ವಂದನಾರ್ಪಣೆಯೊAದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ವಾಸಂತಿಯವರು, ಎಲ್ಲಾ ಬೋಧಕರು, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿ ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾರ್ಥಿ ಶಿಕ್ಷಕ ಸಂಗಪ್ಪ ಅಂಗಡಿ ಹಾಗೂ ಆಶಿಕಾ ಕಾರ್ಯಕ್ರಮ ನಿರೂಪಿಸಿದರು.ಸೋಮವಾರಪೇಟೆ: ಪಟ್ಟಣ ಸಮೀಪದ ಯಡೂರು ಬಿಟಿಸಿಜಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಹರ್ ಘರ್ ಯೋಗ ಕಾರ್ಯಕ್ರಮ ನಡೆಯಿತು. ಆರ್ಟ್ ಆಫ್ ಲಿವಿಂಗ್‌ನ ದೀಪಕ್ ಉಪಾಧ್ಯ ಹಾಗೂ ರಾಗಿಣಿ ಅವರುಗಳು ಕಾಲೇಜಿನ ಉಪನ್ಯಾಸಕ, ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಆಸನಗಳನ್ನು ಹೇಳಿಕೊಟ್ಟರು. ಸಾಮೂಹಿಕ ಯೋಗದಲ್ಲಿ ಎಲ್ಲರೂ ಭಾಗಿಯಾಗಿದ್ದರು. ಮಾನಸಿಕ ಒತ್ತಡ ಮುಕ್ತ ಜೀವನಕ್ಕೆ ಪ್ರಾಣಾಯಾಮಗಳು ಸಹಕಾರಿ. ವಿದ್ಯಾರ್ಥಿಗಳು ಪಾಠಗಳ ಅಭ್ಯಾಸದೊಂದಿಗೆ ಯೋಗಾಭ್ಯಾಸದಲ್ಲೂ ಭಾಗಿಯಾಗಬೇಕು ಎಂದು ದೀಪಕ್ ಉಪಾಧ್ಯ ತಿಳಿಸಿದರು.ವೀರಾಜಪೇಟೆ: ವೀರಾಜಪೇಟೆ ಕಾವೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಆರೋಗ್ಯ ಮತ್ತು ಸರ್ವತೋನ್ಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ.
ಯೋಗ ಕೇವಲ ವ್ಯಾಯಾಮವಲ್ಲ ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆ ಎಂದು ೯ನೇ ತರಗತಿಯ ವಿದ್ಯಾರ್ಥಿ ನಿಶಾನ್ ಎಂ.ಎನ್. ಹಾಗೂ ೭ನೇ ತರಗತಿಯ ವಿದ್ಯಾರ್ಥಿನಿ ಐ.ಬಿ. ಲಿಶಿಕ ಯೋಗದ ಕುರಿತು ಮಾತನಾಡಿ ತಮ್ಮ ಅನಿಸಿಕೆಗÀಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.
ವಿದ್ಯಾರ್ಥಿನಿಯರು ಯೋಗದ ಹಲವು ಆಸನಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ನಂತರ ಯೋಗ ತರಬೇತಿದಾರ ಶ್ರೀನಿವಾಸ್ ಅವರು ನೀಡಿದ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಪ್ರಾಣಯಾಮ, ಸೂರ್ಯ ನಮಸ್ಕಾರ ಹಾಗೂ ಇನ್ನಿತರ ಹಲವಾರು ಆಸನಗಳನ್ನು ಪ್ರದರ್ಶಿಸುವುದರ ಮೂಲಕ ಯೋಗದ ಮಹತ್ವವನ್ನು ಅರಿತರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ, ಶಾಲಾ ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.ವೀರಾಜಪೇಟೆ: ನಗರದ ಪ್ರಗತಿ ಶಾಲೆಯಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನ ಆಚರಿಸಲಾಯಿತು.
ಈ ಸಂದರ್ಭ ಮಕ್ಕಳಿಗೆ ಯೋಗದ ವಿವಿಧ ಪ್ರಕಾರ ಹಾಗೂ ಮಹತ್ವ ಹೇಳಿಕೊಡಲಾಯಿತು. ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪ ಅರುವತ್ತೋಕ್ಕಲು ಸಮೀಪದ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಜರುಗಿತು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗಭ್ಯಾಸದಲ್ಲಿ ತೊಡಗಿಸಿ ಕೊಂಡಿದ್ದರು. ಪೊನ್ನಂಪೇಟೆಯ ಯೋಗಪಟು ಪದ್ಮನಾಭ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ನೀಡಲಾಯಿತು.
ಅಲ್ಲದೆ ಯೋಗಾಸನದ ಮಹತ್ವವನ್ನು ತಿಳಿಸಲಾಯಿತು. ಕಾಲೇಜಿನ ಕನ್ನಡ ಉಪನ್ಯಾಸಕ ಡಿ.ಎನ್. ಸಂತೋಷ್ ಕುಮಾರ್, ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಟಿ.ವಿ. ವೈಷ್ಣವಿ ಪ್ರಾರ್ಥನಾ ಗೀತೆ ಹಾಡಿದರು.ಗೋಣಿಕೊಪ್ಪಲು: ಅರುವತ್ತೋಕ್ಕಲು ಗ್ರಾಮದ ಕಾಡ್ಯಮಾಡ ಕುಟುಂಬದ ಐನ್‌ಮನೆಯ ಗೋಪಾಲ ಗೌರಿ ಟ್ರಸ್ಟ್ ಸಭಾಂಗಣದಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ನಡೆಯಿತು.
ಯೋಗ ಗುರು ಅಳಮೇಂಗಡ ರಾಜಪ್ಪ ಯೋಗಭ್ಯಾಸ ನಡೆಸಿ ಕೊಟ್ಟರು. ಕಾಡ್ಯಮಾಡ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಯೋಗ ಗುರು ಅಳಮೇಂಗಡ ರಾಜಪ್ಪನವರನ್ನು ಕಾಡ್ಯಮಾಡ ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಟಿ. ಸೋಮಣ್ಣ ವಹಿಸಿದ್ದರು.
ಕಾರ್ಯದರ್ಶಿ ಕೆ.ಬಿ. ನೇವಿನ್, ಕೆ.ಎಸ್. ಉದಯ ಸೇರಿದಂತೆ ಪ್ರಮುಖರಾದ ಡಾ. ಬೋಪಣ್ಣ, ಲೆನಿನ್, ಪೂಣಚ್ಚ, ಅಪ್ಪಚ್ಚು ಸುಮನ್, ಹರೀಶ್, ನಿರ್ಮಲ, ಜಮುನ, ಆಶಾ, ಪವಿತ್ರ, ಸರಳ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಚರಿಸಿದರು. ಕಾಲೇಜಿನ ಪ್ರಾಂಶುಪಾಲ ಪಿ.ಯಸ್. ಜಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಗದ ಮಹತ್ವದ ಬಗ್ಗೆ ಮಾತನಾಡಿ ಯೋಗಭ್ಯಾಸ ಮಾಡಿದರು. ಕಾಲೇಜಿನ ಶಿಕ್ಷಕ ವೃಂದದವರು ಯೋಗಾಸನದಲ್ಲಿ ಪಾಲ್ಗೊಂಡರು.ಸೋಮವಾರಪೇಟೆ: ಸೋಮವಾರಪೇಟೆ ಸಮೀಪದ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಿಂದ ಶಾಲಾ ಆವರಣದಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಉಪಾನ್ಯಾಸಕರು, ಶಿಕ್ಷಕರು ಇದ್ದರು.ಆಚರಿಸಲಾಯಿತು. ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಉಪಾನ್ಯಾಸಕರು, ಶಿಕ್ಷಕರು ಇದ್ದರು.ಶಿಕ್ಷಕರು, ಸಿಬ್ಬಂದಿ ಸಾಮೂಹಿಕ ಯೋಗ ಪ್ರದರ್ಶಿಸಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಯೋಗವನ್ನು ಕಲಿಸಿದರೆ ಮಕ್ಕಳು ದೈಹಿಕ-ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಮುಖ್ಯಶಿಕ್ಷಕಿ ಟಿ.ಎನ್. ಚೈತ್ರಾ, ಶಿಕ್ಷಕಿಯರಾದ ಯೋಗೇಶ್ವರಿ, ಪವಿತ್ರ ನೇತೃತ್ವ ವಹಿಸಿದ್ದರು.