೨೦೨೩ನೆ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ ೫ ರಿಂದ ಭಾರತದಲ್ಲಿ ಪ್ರಾರಂಭಗೊಳ್ಳಲಿದ್ದು, ವಿಶ್ವಕಪ್ ವಿಜೇತ ತಂಡಕ್ಕೆ ಲಭಿಸುವ ಅತ್ಯಾಕರ್ಷಕ ಟ್ರೋಫಿಯನ್ನು ಅಂರ‍್ರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ ಬಾಹ್ಯಾಕಾಶದಲ್ಲಿ ತಾ.೨೭ ರಂದು ಅನಾವರಣಗೊಳಿಸಿ ಎಲ್ಲರ ಹುಬ್ಬೇರಿಸಿತು. ಭೂಮಿಯಿಂದ ಸುಮಾರು ೧ ಲಕ್ಷ ೨೦ ಸಾವಿರ ಅಡಿಯೆತ್ತರಕ್ಕೆ - ೬೫ಡಿಗ್ರಿ ಸೆಲ್‌ಶಿಯಸ್ ತಾಪಮಾನದ ಪ್ರದೇಶಕ್ಕೆ ಸ್ಟಾçಟೋಸ್ಫೆರಿಕ್ ಬಲೂನ್ ಮೂಲಕ ಟ್ರೋಫಿಯನ್ನು ಕಳುಹಿಸಲಾಯಿತು. ಅತ್ಯಂತ ಕಡಿಮೆ ತೂಕವಿರುವ ಹೀಲಿಯಮ್ ಅನಿಲ ಉಪಯೋಗಿಸುವ ಸ್ಟಾçಟೋಸ್ಫೆರಿಕ್ ಬಲೂನ್ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು ಭೂಮಿಯ ವಾತಾವರಣದ ಹೊರಪದರವಾದ ಬಹುತೇಕ ಬಾಹ್ಯಾ ಕಾಶ ಪ್ರಾರಂಭ ಗೊಳ್ಳುವ ಸ್ಟಾçಟೋಸ್ಫಿ ಯರ್ ಅನ್ನು ಸುಲಭವಾಗಿ ತಲು ಪಲು ಸಹಕರಿಸಿತು.

ನಂತರ ಈ ಬಾರಿಯ ವಿಶ್ವಕಪ್ ಆತಿಥೇಯ ದೇಶ ಭಾರತದಲ್ಲಿ ಟೂರ್ನಿಯ ಮೊದಲ ಹಾಗೂ ಕೊನೆಯ ಪಂದ್ಯ ಆಯೋಜನೆ ಗೊಂಡಿರುವ ಗುಜರಾತಿನ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಯನ್ನು ಸುರಕ್ಷಿತವಾಗಿ ರಾಕೆಟ್ ಬೂಸ್ರ‍್ಸ್ ಸಹಾಯದಿಂದ ಇಳಿಸಲಾಯಿತು. ಇನ್ನು ಕೆಲ ದಿನಗಳ ಕಾಲ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ೧೮ ದೇಶಗಳಿಗೆ ಈ ಟ್ರೋಫಿ ಪ್ರವಾಸ ಕೈಗೊಳ್ಳಲಿದ್ದು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮತ್ತೆ ವಾಪಸ್ಸಾಗಲಿದೆ. ೫೦ ಓವರ್ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಅಕ್ಟೋಬರ್ ೫ ರಿಂದ ನವೆಂಬರ್ ೧೯ ರವರೆಗೆ ಭಾರತದ ವಿವಿಧ ಕ್ರೀಡಾಂಗಣಗಳಲ್ಲಿ ಜರುಗಲಿದ್ದು, ಅತಿ ಹೆಚ್ಚು ವೀಕ್ಷಕರು ಅಕ್ಟೋಬರ್ ೧೫ ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿಶ್ವದಲ್ಲಿಯೇ ಅತಿದೊಡ್ಡ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣವು ೧ ಲಕ್ಷ ವೀಕ್ಷಕರ ಸಾಮರ್ಥ್ಯವನ್ನು ಹೊಂದಿದೆ.