ಸೋಮವಾರಪೇಟೆ, ಜೂ. ೨೭: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ೨೦೨೨ರ ಜುಲೈನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಸೋಮವಾರ ಪೇಟೆಗೆ ಆಗಮಿಸಿದ್ದು, ಪಟ್ಟಣಕ್ಕೆ ಒತ್ತಿಕೊಂಡಿರುವ ಎರಡು ಗ್ರಾಮಗಳಲ್ಲಿ ಪರಿಶೀಲನೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಿಗ್ಗೆ ಸೋಮವಾರಪೇಟೆಗೆ ಆಗಮಿಸಿದ ನಾಲ್ವರು ಅಧಿಕಾರಿಗಳ ತಂಡ ಪಟ್ಟಣ ಸಮೀಪದ ಕಾನ್ವೆಂಟ್‌ಬಾಣೆ ಹಾಗೂ ಕಲ್ಕಂದೂರು ಗ್ರಾಮಗಳಿಗೆ ತೆರಳಿ ಈರ್ವರ ಮನೆಗಳನ್ನು ಪರಿಶೀಲಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ಕಾನ್ವೆಂಟ್‌ಬಾಣೆಯ ಅಬ್ದುಲ್‌ನಾಸಿರ್ ಹಾಗೂ ಕಲ್ಕಂದೂರು ಗ್ರಾಮದ ಅಬ್ದುಲ್ ರೆಹಮಾನ್ (ಅದ್ರಾಮ) ಎಂಬವರುಗಳ ಮನೆಗಳಿಗೆ ತೆರಳಿರುವ ಅಧಿಕಾರಿಗಳು, ಮನೆಯವರಿಂದ ಈರ್ವರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈರ್ವರು ಕಳೆದ ಕೆಲ ಸಮಯಗಳಿಂದ ಮನೆಗೆ ಆಗಮಿಸದೇ ಇರುವ ಬಗ್ಗೆ ಮನೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆಯೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಎನ್‌ಐಎ ಅಧಿಕಾರಿಗಳು ನಂತರ ಖಾಸಗಿ ವಾಹನದಲ್ಲಿ ಕಲ್ಕಂದೂರು ಹಾಗೂ ಕಾನ್ವೆಂಟ್ ಬಾಣೆಗೆ ತೆರಳಿದ್ದಾರೆ.
ಕಾನ್ವೆಂಟ್‌ಬಾಣೆಯ ಅಬ್ದುಲ್ ನಾಸಿರ್ ಹಾಗೂ ಕಲ್ಕಂದೂರಿನ ಅಬ್ದುಲ್ ರೆಹಮಾನ್ ಅವರುಗಳ ಮನೆಗೆ ತೆರಳಿದ ಅಧಿಕಾರಿಗಳು, ಈರ್ವರ ಬಗ್ಗೆ ಮಾಹಿತಿ ಪಡೆದಿದ್ದು, ಕೆಲವೊಂದು ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
(ಮೊದಲ ಪುಟದಿಂದ) ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇವರುಗಳ ಪಾಲುದಾರಿಕೆಯ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದ್ದು, ಇಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸೋಮವಾರಪೇಟೆಯಲ್ಲಿದ್ದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿರುವ ಬಗ್ಗೆ ತಿಳಿದುಬಂದಿದೆ.
ಇAದು ಬೆಳಿಗ್ಗೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ೬ ಕಡೆಗಳಲ್ಲಿ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಮನೆಗಳ ಮೇಲೆ ಧಾಳಿ ನಡೆಸಿದ್ದು, ಇದರಲ್ಲಿ ಕೊಡಗಿನ ಎರಡು ಸ್ಥಳಗಳು ಸೇರಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕಳೆದ ೨೦೨೨ರ ಜುಲೈ ೨೬ರಂದು ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಈ ಘಟನೆಯ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಮಾತ್ರವಲ್ಲದೆ, ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಸುಳ್ಯದ ಶಾಸಕ ಅಂಗಾರ ಸೇರಿದಂತೆ ಮುಖಂಡರುಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಾದ ನಂತರ ಪ್ರಕರಣವನ್ನು ಅಂದಿನ ರಾಜ್ಯ ಸರ್ಕಾರ ಎನ್‌ಐಎಗೆ ವಹಿಸಿದ್ದು, ತನಿಖೆ ಆರಂಭಿಸಿದ ಅಧಿಕಾರಿಗಳು ಪ್ರಕರಣದಲ್ಲಿ ಈವರೆಗೆ ಒಟ್ಟು ೨೧ ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕೃತ್ಯದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಮಡಿಕೇರಿಯ ತುಫೈಲ್‌ನನ್ನು ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಯುಎಪಿಎ ಕಾಯ್ದೆಯಡಿ ಒಟ್ಟು ಈ ಪ್ರಕರಣದಲ್ಲಿ ೨೧ ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವ ಬಗ್ಗೆ ಎನ್‌ಐಎ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದು, ಜನವರಿ ೨೦ರಂದು ಸಲ್ಲಿಸಲಾದ ವರದಿಯಲ್ಲಿ ಪಿಎಫ್‌ಐ ತನ್ನ ವೈರಿಗಳ ಹತ್ಯೆ ಮಾಡಲು ‘ಹಿಟ್ ಸ್ಕಾ÷್ವಡ್’ ರಚಿಸಿ ಅದರ ಮೂಲಕ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಬಹಿರಂಗಪಡಿಸಿತ್ತು.
ಇದೀಗ ಸೋಮವಾರಪೇಟೆಯ ಈರ್ವರ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮನೆಗೆ ಆಗಮಿಸಿದ ಅಧಿಕಾರಿಗಳು ಬಾಗಿಲು ಭದ್ರಪಡಿಸಿ ಹಲವು ಗಂಟೆಗಳ ಕಾಲ ಮನೆಯವರನ್ನು ವಿಚಾರಣೆಗೆ ಒಳಪಡಿಸಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಎನ್‌ಐಎ ಅಧಿಕಾರಿಗಳು ಧಾಳಿ ನಡೆಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ನಮಗೆ ಲಭ್ಯವಿರುವುದಿಲ್ಲ. ಎನ್‌ಐಎ ಅಧಿಕಾರಿಗಳೇ ತನಿಖೆ ನಡೆಸುವ ಹಿನ್ನೆಲೆ ನಮಗೆ ಪೂರ್ಣ ವಿವರ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.