ವೀರಾಜಪೇಟೆ, ಜೂ. ೨೭: ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ಕೊಡವರ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕೆಂದು ಸಮಾಜ ಸೇವಕ ಚೇನಂಡ ರಘು ಉತ್ತಪ್ಪ ಅವರು ಕರೆ ನೀಡಿದರು.

ವೀರಾಜಪೇಟೆ ಪೊಂಬೊಳ್ಚ ಕೂಟ ವತಿಯಿಂದ ರಾಜರಾಜೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಒತ್ತೋರ್ಮೆ ಕೂಟ ಕಾರ್ಯಕ್ರಮ ವನ್ನು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತ ನಾಡಿದ ಮುಖ್ಯ ಅತಿಥಿ ಚೇನಂಡ ರಘು ಉತ್ತಪ್ಪ ಅವರು, ಸ್ವಾಭಿಮಾನಿ ಕೊಡವರು ಒಗ್ಗಟ್ಟನ್ನು ಪ್ರದರ್ಶಿಸುವ ಅಗತ್ಯವಿದೆ. ಕೊಡವ ಸಮುದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳು, ಸನ್ಮಾನಿತರು ಗಳಾದ ಹಿರಿಯ ಸಾಹಿತಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಮಲ್ಚೀರ ಯಶೋಧಾ ದೇವಯ್ಯ, ಪಂಚ ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಪೊಂಬೊಳ್ಚ ಕೂಟದ ಅಧ್ಯಕ್ಷ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡವ ಜನಾಂಗದ ನಾವೆಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊAದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿ ಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸ ಬೇಕು. ಮಹಿಳೆಯರು ಕೇವಲ ಅಡುಗೆಮನೆಗಷ್ಟೇ ಸೀಮಿತಗೊಳಿಸದೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಯುವಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರಿಗಿದೆ. ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವುದು ಪ್ರತಿ ಪೋಷಕರ ಜವಾಬ್ದಾರಿ. ಅವರಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿಸಿಕೊಡು ವಂತಾಗಬೇಕು. ಹಿರಿಯರನ್ನು ಕಡೆಗಣಿಸಬಾರದು ಎಂದು ಕರೆ ನೀಡಿದರು.

ಪೊಂಬೊಳ್ಚ ಕೂಟದ ಅಧ್ಯಕ್ಷ ಮಾಳೇಟಿರ ಶ್ರೀನಿವಾಸ್ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ತಪ್ಪಡ್ಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೊಂಬೊಳ್ಚ ಕೂಟ ನಡೆದು ಬಂದ ಹಾದಿಯ ಬಗ್ಗೆ ಕೂಟದ ಸಂಸ್ಥಾಪಕ ಅಧ್ಯಕ್ಷ ಕೊಟೇರ ಉದಯ ಪೂಣಚ್ಚ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೂಟದ ಆಡಳಿತ ಮಂಡಳಿಯ ವರದಿಯನ್ನು ಚಂಗೇಟಿರ ಸೋಮಣ್ಣ ವಾಚಿಸಿದರು.

ಈ ಸಂದರ್ಭ ಉಪಾಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಗೌರವ ಅಧ್ಯಕ್ಷೆ ಬೊಪ್ಪಂಡ ಸರಳಾ ಕರಂಬಯ್ಯ, ಕಾರ್ಯದರ್ಶಿ ಚಂಗೆಟಿರ ಸೋಮಣ್ಣ, ಸಹ ಕಾರ್ಯದರ್ಶಿ ಶಿವಾಚಾಳಿಯಂಡ ರೋಹಿಣಿ ಬೋಪಣ್ಣ, ಸಂಘಟನಾ ಕಾರ್ಯದರ್ಶಿ ಚೇನಂಡ ತೇಜ ಬೋಪಣ್ಣ, ಸಲಹೆಗಾರರ ಬಿದ್ದಂಡ ನಾಣಿ ದೇವಯ್ಯ, ನಿರ್ದೇಶಕರುಗಳು ಹಾಜರಿದ್ದರು.