ಮಡಿಕೇರಿ, ಜೂ. ೨೭: ಆ್ಯಡಮ್ ಸ್ಮಿತ್ ಜನ್ಮದಿನಾಚರಣೆಯ ಅಂಗವಾಗಿ ’ಆ್ಯಡಮ್ ಸ್ಮಿತ್ ಇನ್ನೂ ಮುನ್ನೂರು ವರ್ಷಗಳಲ್ಲಿಯೂ ಪ್ರಸ್ತುತ’ ಎನ್ನುವ ವಿಷಯದ ಮೇಲೆ ಗೋಣಿಕೊಪ್ಪದ ಕೂರ್ಗ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತç ವಿಭಾಗದ ಮಕ್ಕಳಿಗೆ ಪುಷ್ಟೀಕರಣ ಅಧಿವೇಶನವನ್ನು ಏರ್ಪಡಿಸಲಾಗಿತ್ತು.

ಉಪನ್ಯಾಸಕಿ ಪವಿತ್ರ ಕೆ.ಸಿ. ಮಾತನಾಡಿ, ``ಆಡಂ ಸ್ಮಿತ್ ರಾಜಕೀಯ ಅರ್ಥಶಾಸ್ತçದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆAದೂ ಗೌರವಿಸಲ್ಪಡುತ್ತಾರೆ. ಆತನ ``ವೆಲ್ತ್ ಆಫ್ ನೇಶನ್’’ ಮಹಾಗ್ರಂಥ ಒಂದು ಕ್ರಾಂತಿಯನ್ನೇ ಮಾಡಿ, ವಾಣಿಜ್ಯ ಪಂಥದ ಅಭಿಪ್ರಾಯಗಳನ್ನು ಅಸಂಗತವಾಗಿಸಿ, ಮುಕ್ತ ಆರ್ಥಿಕ ನೀತಿಯನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ರಾಮಚಂದ್ರನ್ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿ, ``ಅರ್ಥಶಾಸ್ತçವನ್ನು ಕರಾರುವಕ್ಕಾಗಿ ಸಮರ್ಪಕ ಶಬ್ದಗಳಿಂದ ವ್ಯಾಖ್ಯಾನಿಸಿದವರಲ್ಲಿ ಆ್ಯಡಮ್ ಸ್ಮಿತ್ ಮೊದಲಿಗನೆನೆಸಿದ್ದಾನೆ. ಅರ್ಥಶಾಸ್ತçವು ಸಂಪತ್ತನ್ನು ಹೇಗೆ ಉತ್ಪಾದಿಸುವುದು ಮತ್ತು ಹಂಚುವುದು ಎನ್ನುವುದನ್ನು ವಿವರಿಸುತ್ತದೆ ಎಂದರು.

ಉಪ ಪ್ರಾಂಶುಪಾಲೆ ವಿಜಯಲಕ್ಷಿö್ಮ ಎಸ್. ವೇದ ಬೋಪಣ್ಣ ಮತ್ತು ಶೈಕ್ಷಣಿಕ ಸಂಯೋಜಕಿ ಸಾಂಚಿತ ಚೆಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.