ವೀರಾಜಪೇಟೆ, ಜೂ ೨೮: ಕಾಫಿ ತೋಟದಲ್ಲಿ ಇಳುವರಿ ಹೆಚ್ಚಾಗ ಬೇಕಾದರೆ ಮಣ್ಣಿನ ಫಲವತ್ತತೆ ಬಹು ಮುಖ್ಯ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೃಷಿ ವಿಜ್ಞಾನಿ ಡಾ. ದೇವಯ್ಯ ಅಭಿಪ್ರಾಯ ಪಟ್ಟರು. ಬೇಟೋಳಿ ಗ್ರಾಮದ ರಾಮ ನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸಭಾ ಭವನದಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ದರ್ಬೆ, ಪುತ್ತೂರು ಇವರ ನೇತೃತ್ವದಲ್ಲಿ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಸಹಯೋಗ ದಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ದೇವಯ್ಯ ಅವರು, ಮಣ್ಣಿನ ಫಲವತ್ತತೆ ಕೇವಲ ತೋಟಕ್ಕೆ ರಸಗೊಬ್ಬರಗಳನ್ನು ಹಾಕುವುದರಿಂದ ಬರುವುದಿಲ್ಲ. ಕಾಡು ಮರಗಳನ್ನು ಹಾಗೇ ಉಳಿಸಿಕೊಳ್ಳುವುದರಿಂದ ಕಾಡು ಮರದ ಎಲೆಗಳು ತೋಟದಲ್ಲಿ ಉದುರಿ, ಕರಗಿ ಗೊಬ್ಬರವಾಗುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುತ್ತವೆ. ಕೊಡಗು ಒಂದು ಕಾಲದಲ್ಲಿ ಮುಖ್ಯವಾಗಿ ಭತ್ತವನ್ನು ಅವಲಂಭಿಸಿದ ಜಿಲ್ಲೆಯಾಗಿತ್ತು.

ಸ್ಪಿçಂಕ್ಲಿAಗ್ ವ್ಯವಸ್ಥೆ ಬಂದ ಬಳಿಕ ಕಾಫಿ ಬೆಳೆಯತ್ತ ಹೆಚ್ಚಿನ ಜನರ ಒಲವು ಬೆಳೆಯಿತು. ಬ್ರೆಜಿಲ್ ದೇಶದಲ್ಲಿ ಹವಾಮಾನ ವೈಪರಿತ್ಯದಿಂದ ತೋಟ ಗಳಲ್ಲಿ ಗಿಡಗಳೇ ಹೋಗಿರುವುದರಿಂದ ಅವರು ಹೊಸದಾಗಿ ಗಿಡನೆಟ್ಟು ಫಸಲು ಪಡೆಯಲು ನಾಲ್ಕೆöÊದು ವರ್ಷಗಳು ಬೇಕು. ಅಲ್ಲಿಯವರೆಗೂ ಅಂರ‍್ರಾಷ್ಟಿçÃಯ ಮಾರುಕಟ್ಟೆಯಿಂದ ನಾವು ಒಳ್ಳೆಯ ಬೆಲೆಯನ್ನು ನಿರೀಕ್ಷೆ ಮಾಡಬಹುದು. ಗೊಬ್ಬರದಲ್ಲಿ ನ್ಯೂನತೆ, ನೆರಳು ನಿರ್ವಹಣೆ ಮಾಡದೇ ಇರುವುದು ಇವೆಲ್ಲ ಕಾರಣ ದಿಂದ ಬೆಳೆಗಾರರು ಪಡೆಯುತ್ತಿರುವ ಫಸಲಿನಲ್ಲಿ ಇಳಿಮುಖವಾಗುತ್ತಿದೆ. ಹಾಗೆಯೇ ಕಾಫಿಗಿಡ ನಾಟಿ ಮಾಡುವುದರ ಬಗ್ಗೆ ನಿರ್ವಹಣೆ ಬಗ್ಗೆ ಹತ್ತು ಹಲವಾರು ಸಲಹೆಗಳನ್ನು ನೀಡಿದರು. ಕೃಷಿ ವಿಜ್ಞಾನಿ ಡಾ. ಬಿ. ಪ್ರಭಾಕರ ಅವರು ಮಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬರು ಮಣ್ಣಿನ ಪರೀಕ್ಷೆ ಮಾಡಿಸಿ ಬಳಿಕವಷ್ಟೇ ರಸಗೊಬ್ಬರಗಳನ್ನು ಹಾಕುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯ ಬಹುದು. ಮಣ್ಣಿನ ರಾಸಾಯನಿಕ, ಭೌತಿಕ, ಜೈವಿಕ ಆರೋಗ್ಯ ಮುಖ್ಯ ವಾಗುತ್ತದೆ ಎಂದು ಮಣ್ಣು ಪರೀಕ್ಷೆ ಸೇರಿದಂತೆ ಹಲವಾರು ಮಾಹಿತಿ ನೀಡಿದರು. ಸಸ್ಯ ಸಂರಕ್ಷಣೆ ಕೃಷಿ ವಿಜ್ಞಾನಿ ಡಾ. ವಿರೇಂದ್ರಕುಮಾರ್ ಅವರು ವಿವಿಧ ಬೆಳೆಗಳಲ್ಲಿ ಅನುಸರಿಸಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮಾತನಾಡಿ, ಬೋರ್ಡೋ ದ್ರಾವಣವನ್ನು ವೈಜ್ಞಾನಿಕ ರೀತಿಯಲ್ಲಿ ಸಿಂಪಡಣೆ ಮಾಡುವ ವಿಧಾನದ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದ್ದರಲ್ಲದೇ ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೂ ಹೇಗೆ ರಾಸಾಯನಿಕ ಸಿಂಪಡÀಣೆ ಮಾಡುವುದು ಎನ್ನುವುದರ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮದ ಕೃಷಿಕರು ಕೃಷಿ ಹಾಗೂ ಮಣ್ಣು ಪರೀಕ್ಷೆ ಸಂಬAಧಿಸಿದAತೆ ಹಲವಾರು ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮದ ಕೃಷಿಕರು ಕೃಷಿ ಹಾಗೂ ಮಣ್ಣು ಪರೀಕ್ಷೆ ಸಂಬAಧಿಸಿದAತೆ ಹಲವಾರು ಪ್ರಶ್ನೆಗಳನ್ನು ವಿಜ್ಞಾನಿಗಳಿಗೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊAಡರು.

ಕಾರ್ಯಾಗಾರದಲ್ಲಿ ಸರಸ್ವತಿ ಚಾರಿಟೆಬಲ್ ಟ್ರಸ್ಟಿನ ಮುಖ್ಯಸ್ಥರಾದ ವಸಂತ್ ನಾಯ್ಕ್, ಸತೀಶ್ಚಂದ್ರ, ಡಾ. ರಾಮಕೃಷ್ಣ ಬಿ.ಬಿ, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಕಾರ್ಯಾನುಗುಣ ನಿರ್ದೇಶಕ ಶ್ರೀಕಾಂತ್ ರಾವ್, ಜ್ಯೋತಿ ಶ್ರೀಕಾಂತ್‌ರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.