ಸುಂಟಿಕೊಪ್ಪ, ಜೂ. ೨೮: ಸುಂಟಿಕೊಪ್ಪ ಪಟ್ಟಣದಲ್ಲಿ ಸಂತೆ ದಿನವಾದ ಭಾನುವಾರ ಜನಜಂಗುಳಿ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಿಂದಲೂ ಸಂತೆ ಮಾರುಕಟ್ಟೆಗೆ ಗ್ರಾಹಕರು ಬರುತ್ತಾರೆ. ರಾಷ್ಟಿçÃಯ ಹೆದ್ದಾರಿ ಇಲ್ಲಿ ಹಾದು ಹೋಗಿದ್ದು, ಹೆದ್ದಾರಿ ರಸ್ತೆ ಬದಿ ದಿಢೀರನೆ ಗೂಡ್ಸ್ ಗಾಡಿಗಳಲ್ಲಿ ಚಪ್ಪಲಿ ಹಣ್ಣು ಹಂಪಲು ಅಂಗಡಿಗಳು, ಸೇರಿದಂತೆ ಇತರೆ ಸಾಮಗ್ರಿಗಳ ಅಂಗಡಿಗಳು ತಲೆ ಎತ್ತುವುದರಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತದೆ.
ಶನಿವಾರ ಹಾಗೂ ಭಾನುವಾರ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಈ ರಸ್ತೆಗಾಗಿ ಸಂಚರಿಸುತ್ತಿದ್ದು, ರಸ್ತೆ ಬದಿ ಅಂಗಡಿಗಳನ್ನು ತೆರೆದು ಮಾರಾಟ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಅಲ್ಲದೆ, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಂಬAಧಿಸಿದ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.