ನಿರ್ವಹಣೆ ಕಾಮಗಾರಿಗೆ ಸಮಸ್ಯೆ

ಕೂಡಿಗೆ, ಜೂ. ೨೮: ಹಾರಂಗಿಯ ಮುಖ್ಯ ನಾಲೆಯಿಂದ ಕೊಡಗಿನ ಗಡಿ ಭಾಗದವರೆಗೆ ಮುಖ್ಯ ನಾಲೆಗೆ ಹೊಂದಿಕೊAಡAತೆ ಮತ್ತು ನಾಲೆ ಹದ್ದುಬಸ್ತು ಜಾಗದಲ್ಲಿ ಬೆಳೆದಿರುವ ಮರಗಳ ತೆರವಿಗೆ ಹಾರಂಗಿ ನೀರಾವರಿ ಇಲಾಖೆಯ ವತಿಯಿಂದ ಸಂಬAಧಿಸಿದ ಅರಣ್ಯ ಇಲಾಖೆಗೆ ಮರಗಳ ತೆರವಿಗೆ ಅರ್ಜಿಯನ್ನು ಸಲ್ಲಿಸಿ ಏಳು ವರ್ಷಗಳು ಕಳೆದರೂ ಇನ್ನೂ ಮರಗಳು ತೆರವುಗೊಳ್ಳದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಹಾರಂಗಿ ಅಣೆಕಟ್ಟೆಯ ಕಾಮಗಾರಿಯು ಪೂರ್ಣವಾದ ನಂತರ ನಿರ್ಮಾಣವಾದ ಅಣೆಕಟ್ಟೆಯಿಂದ ರೈತರಿಗೆ ಬೇಸಾಯಕ್ಕೆ ನೀರು ಹರಿಸಲು ಅನುಕೂಲವಾಗುವಂತೆ ಮುಖ್ಯ ನಾಲೆ ಸೇರಿದಂತೆ ಎಡದಂಡೆ, ಬಲದಂಡೆಯ ನಾಲೆಯ ಕಾಮಗಾರಿಗಳು ನಡೆದು, ಉಳಿದ ನಾಲೆಯ ವ್ಯಾಪ್ತಿಯ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನೆರಳು ಮಾದರಿಯ ಮರಗಳ ಸಸಿಗಳನ್ನು ಅರಣ್ಯ ಇಲಾಖೆಯವರು ಆಗಿನ ಸಂದರ್ಭದಲ್ಲಿ ನೆಟ್ಟರು. ಇದೀಗ ಬೃಹತ್ ಗಾತ್ರದಲ್ಲಿ ಮುಖ್ಯ ನಾಲೆಯ ಅಂಚಿನಲ್ಲಿ ಬೆಳೆದು ನಿಂತಿವೆ. ಮರಗಳ ಬೇರುಗಳು ಮಣ್ಣಿನ ಮುಖ್ಯ ನಾಲೆಯ ಒಳಗೆ ಬೆಳೆದುನಿಂತಿವೆ. ಇದರ ಪರಿಣಾಮವಾಗಿ ಮುಖ್ಯ ನಾಲೆಯ ನೀರು ಸಹ ಸೋರಿಕೆಯಾಗುತ್ತಿದೆ. ಇದರಿಂದಾಗಿ ಅನೇಕ ತೂಬಿನ ರೈತರಿಗೆ ಭಾರಿ ತೊಂದರೆಗಳು ಆಗುತ್ತಿವೆೆ.

ಅಣೆಕಟ್ಟೆಯು ನಿರ್ಮಾಣಗೊಂಡ ನಂತರ ಇದುವರೆಗೂ ಮುಖ್ಯ ನಾಲೆಯ ನಿರ್ವಹಣೆ ಕಾಮಗಾರಿ ನಡೆದಿಲ್ಲ. ಇದರಿಂದಾಗಿ ಹುದುಗೂರು ಮತ್ತು ಕಾಳಿದೇವನ ಹೊಸೂರು ವ್ಯಾಪ್ತಿಯಲ್ಲಿ ನೀರಿನ ಸೋರಿಕೆಯಿಂದ ನಾಲೆಯ ಕೆಳ ಭಾಗ ಜಮೀನು ಶೀತಗೊಂಡು ಯಾವುದೇ ಬೆಳೆ ಬರುತ್ತಿಲ್ಲ್ಲ ಎಂದು ಈ ಭಾಗದ ನೂರಾರು ರೈತರು ಅನೇಕ ಬಾರಿ ಮನವಿಯನ್ನು ನಿಗಮಕ್ಕೆ ಸಲ್ಲಿಸಿದ್ದಾರೆ. ಆದರೆ ಇದೀಗ ಕಾವೇರಿ ನೀರಾವರಿ ನಿಗಮದ ಮೂಲಕ ಮುಖ್ಯ ನಾಲೆಯ ದುರಸ್ತಿಗೆ ಸಂಬAಧಿಸಿದAತೆ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಕಿರು ಸೇತುವೆಗಳ ನಿರ್ಮಾಣದ ಕಾರ್ಯ ಸೇರಿದಂತೆ ಮುಖ್ಯ ನಾಲೆಯ ಕಾಂಕ್ರೀಟ್‌ಕರಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಅದರಿಂದ ನಾಲೆಯ ಮರಗಳ ತೆರವು ಮುಖ್ಯವಾಗಿರುತ್ತದೆ. ಸಂಬAಧಿಸಿದ ಅರಣ್ಯ ಇಲಾಖೆಯವರು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ನಾಲೆ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ನಂತರ ನಿಗಮದ ಮೂಲಕ ಹಣ ಬಿಡುಗಡೆಯ ನಂತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ