ಗೋಣಿಕೊಪ್ಪ ವರದಿ, ಜೂ. ೨೮: ಮನೆಕೋರ್ ಗೆಜ್ಜೆ ತಂಡ್, ಒಕ್ಕಕೋರ್ ಕರಿಮರ ಅಭಿಯಾನದಡಿ ತೂಚಮಕೇರಿ ಗ್ರಾಮದಲ್ಲಿ ಮಾಣಿಪಂಡ ಸಂತೋಷ್ ತಮ್ಮಯ್ಯ ನೇತೃತ್ವದಲ್ಲಿ ಗಿಡ ನೆಡಲಾಯಿತು. ತೂಚಮಕೇರಿ ಗ್ರಾಮದ ಪೆಮ್ಮಂಡ ಐನ್‌ಮನೆಯಲ್ಲಿ ಕರಿಮರ ಗಿಡ ನೆಡಲಾಯಿತು.
ಅಭಿಯಾನದಲ್ಲಿ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಹಾಗೂ ಪರಿವರ್ತನಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಕೋಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೆಮ್ಮಂಡ ಭರತ್, ಸ್ಥಳೀಯರಾದ ಪೆಮ್ಮಂಡ ಗಿಣಿ, ಪೆಮ್ಮಂಡ ಗಾಂಧಿ ಇದ್ದರು.