ಸುಂಟಿಕೊಪ್ಪ, ಜೂ. ೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಗದ್ದೆ ಹಳ್ಳÀ ಸಮೀಪದ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಜೆ ವೇಳೆ ಪ್ರವಾಸಿಗರ ಟೆಂಪೋ ಟ್ರಾವೆಲ್ ಹಾಗೂ ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದ ಜೀಪ್ ನಡುವೆ ಡಿಕ್ಕಿಯಾಗಿ ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.

ಮೈಸೂರಿನಿಂದ ತಲಕಾವೇರಿಯ ಭಾಗಮಂಡಲಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಟೆಂಪೋ ಟ್ರಾವಲ್ ಹಾಗೂ ಮಡಿಕೇರಿ ಅಬ್ಬಿ ಪಾಲ್ಸ್ ಸಮೀಪದ ತೋಟದಿಂದ ಕಾರ್ಮಿಕರನ್ನು ಸುಂಟಿಕೊಪ್ಪಕ್ಕೆ ಕರೆದುಕೊಂಡು ಬರುತ್ತಿದ್ದ ಬೊಲೆರೊ ಜೀಪ್ ನಡುವೆ ಡಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಸುಂಟಿಕೊಪ್ಪದ ಕೂಲಿ ಕಾರ್ಮಿಕರಾದ ಮಂಜುನಾಥ, ರಾಮ, ಜೀಪ್ ಚಾಲಕನಾದ ಎನ್.ಮಂಜೇಶ ಹಾಗೂ ಅಸ್ಸಾಂ ಮೂಲದ ಕಾರ್ಮಿಕರಾದ ನಿಸಾಬುಲ್, ಅಬುಸಮ, ಇಜಾರಿ, ಅಕ್ಲೀಮ್, ಅನಾರ್ ಹುಸೈನ್, ನೂರ್ ಜೂನ್ ಎಂಬವರುಗಳಿಗೆ ಗಂಭೀರ ಗಾಯಗಳಾಗಿದ್ದು, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಟೆಂಪೋ ಟ್ರಾವಲ್ ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳ ಮುಂಭಾಗ ನಜ್ಜು ಗುಜ್ಜಾಗಿದೆ. ಸುಂಟಿಕೊಪ್ಪ ಎಎಸ್‌ಐ ಶ್ರೀನಿವಾಸ್ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.