ಚಕ್ರಾಸನ

ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಇದು ದೇಹದ ನಮ್ಯತೆ ಹೆಚ್ಚಿಸಲು, ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಕಾಪಾಡಿ ಕೊಳ್ಳಲು ಮಾಡಬಹುದಾದ ಉತ್ತಮ ವ್ಯಾಯಾಮ ಎಂದು ಹೇಳಲಾಗಿದೆ. ಸ್ನಾಯು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದೃಷ್ಟಿ ತೀಕ್ಷ÷್ಣಗೊಳಿಸುತ್ತದೆ. ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತವನ್ನು ಶುದ್ಧೀಕರಿಸಲು ಇದು ಸಹಕಾರಿ. ಇದು ನಿಮಗೆ ದೈಹಿಕ ಪ್ರಯೋಜನ ನೀಡುತ್ತದೆ ಮತ್ತು ಆಲೋಚನೆಯ ಸ್ಪಷ್ಟತೆ ಮತ್ತು ಮಾನಸಿಕ ಶಾಂತಿ ನೀಡುತ್ತದೆ.

ದೇಹದ ತ್ರಾಣ ಮತ್ತು ಶಕ್ತಿ ನಿರ್ಮಿಸಲು ಸಹಾಯ ಮಾಡುತ್ತದೆ. ಚಕ್ರಾಸನ ಅಭ್ಯಾಸವು ವ್ಯಕ್ತಿಯನ್ನು ಶಕ್ತಿಯುತವಾಗಿರಿಸುತ್ತದೆ. ಜೊತೆಗೆ ಬಳಲಿಕೆ ಕಡಿಮೆ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಕೋರ್ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.

-ವಿಶ್ಮಾ ದಯಾನಂದ ರೈ, ೬ನೇ ತರಗತಿ

ನ್ಯಾಷನಲ್ ಅಕಾಡೆಮಿ ಸ್ಕೂಲ್, ಅತ್ತೂರು, ಗೋಣಿಕೊಪ್ಪ

ವೃಕ್ಷಾಸನ

ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲು ವಂಥದ್ದು ಹಾಗಾಗಿ ವೃಕ್ಷಾಸನ ಎನ್ನಲಾಗುತ್ತದೆ. ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ.

ದೃಷ್ಟಿಯನ್ನು ಒಂದು ಕಡೆ ಇಟ್ಟು ದೇಹವನ್ನು ಬ್ಯಾಲೆನ್ಸ್ ಮಾಡುವುದರಿಂದ ನರಗಳು ಬಲವಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

-ಸೂರ್ಯ ತ್ರಿಭುವನ್, ೯ನೇ ತರಗತಿ

ಫಾತಿಮ ಕಾನ್ವೆಂಟ್, ಕುಶಾಲನಗರ

ಮೊ. ೬೩೬೨೫೬೩೦೦೩

ವೃಕ್ಷಾಸನ

ಆರೋಗ್ಯವಿಲ್ಲದವನ ಬಾಳು ಬರೀ ಗೋಳು. ಅಡಿಕೆ ಇಲ್ಲದ ವಿಳ್ಯದಂತೆ ಕಿಟಕಿ ಇಲ್ಲದ ಮನೆಯಂತೆ ಎಂಬ ನಾಣ್ಣುಡಿ ನಮ್ಮೆಲ್ಲರಿಗೂ ಚಿರಪರಿಚಿತ. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗವು ಸದಾ ಸಂಜೀವಿನಿ. ಯೋಗ ಬಲ್ಲವನಿಗೆ ರೋಗವಿಲ್ಲ. ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ಆಚರಿಸಲ್ಪಡುತ್ತಿರುವ ಯೋಗ ವಿದ್ಯೆಯು ಆರೋಗ್ಯ ಕಾಪಾಡುವಲ್ಲಿ ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ.

ವರ್ಷಗಳಿಂದಲೂ ಉಳಿದು ಬಂದಿರುವ ಅತ್ಯಂತ ಸಾಮಾನ್ಯ ಆಸನಗಳಲ್ಲಿ ವೃಷಾಸನವು ಒಂದಾಗಿದೆ. ವೃಕ್ಷ ಎಂದರೆ ಮರ. ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದು ವೃಕ್ಷಾಸನ ಸಮತೋಲನ ಭಂಗಿಯಾಗಿ ರುವ ವೃಕ್ಷಾಸನÀವನ್ನು ನಿತ್ಯ ಮಾಡುವುದರಿಂದ ಅಂಗ ವಿನ್ಯಾಸವನ್ನು ಸುಧಾರಿಸುತ್ತದೆ. ಮನಸ್ಸನ್ನು ವಿಶ್ರಾಂತಿಸು ತ್ತದೆ. ಸೊಂಟ, ಬೆನ್ನಿನ ಮೂಲೆ, ಕಾಲಿನ ಮಂಡಿಯನ್ನು ಬಲಪಡಿಸುತ್ತದೆ. ನರಗಳು ಬಲವಾಗುತ್ತದೆ. ತಾಳ್ಮೆ ಹೆಚ್ಚುವುದರ ಜೊತೆಗೆ ಮಾನಸಿಕ ಯೋಗಕ್ಷೇಮ, ಗಮನ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತಾ ದೇಹ ಮತ್ತು ಮನಸ್ಸಿಗೆ ಸ್ಫೂರ್ತಿಯನ್ನು ತುಂಬಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಲ್ಲಾ ಕೋನಗಳಿಂದ ಉಪಕಾರಿಯಾಗಿರುವ ವೃಕ್ಷಾಸನ ಸರ್ವರಿಗೂ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಸುಖೀ ಜೀವನದ ಅಂಶಗಳಾದ ಆರೋಗ್ಯ, ಸುಖ, ಶಾಂತಿ, ನೆಮ್ಮದಿ, ಏಕಾಗ್ರತೆ, ಶಿಸ್ತು ಸಂಯಮಗಳನ್ನು ನಿರಾಯಾಸವಾಗಿ ಖರ್ಚಿಲ್ಲದೆ ಕೊಂಡುಕೊಳ್ಳಬಹುದು.

-ಕೊAಬAಡ ತನ್ಮಯ ಚಂದ್ರಕಾAತ್, ೧೦ನೇ ತರಗತಿ

ಫಾತಿಮ ಕಾನ್ವೆಂಟ್ ಪ್ರೌಢಶಾಲೆ, ಕುಶಾಲನಗರ

ಮೊ. ೮೩೧೦೧೨೨೨೫೭

ವೃಕ್ಷಾಸನ

ಜೂನ್ ೨೧ ರಂದು ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡಲಾಗು ತ್ತಿದೆ. ಮೊದಲ ಬಾರಿ ೨೦೧೫ ಜೂನ್ ೨೧ ರಂದು ವಿಶ್ವ ಯೋಗ ಆಚರಣೆ ಮಾಡಲಾಗಿದೆ. ಉತ್ತಮ ಆರೋಗ್ಯಕ್ಕೆ ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಈ ಬಾರಿಯ ಯೋಗ ದಿನದ ಘೋಷವಾಕ್ಯ ವಸುದೈವ ಕುಟುಂಬಕ್ಕಾಗಿ ಯೋಗ. ಅಂದ್ರೆ ಮನೆ-ಮನೆಯಲ್ಲಿ ಯೋಗ ಎಂದಾಗಿದೆ. ವೃಕ್ಷಾಸನ ಮನಸ್ಸನ್ನು ಪ್ರಶಾಂತವಾಗಿಸುತ್ತದೆ, ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ನರಗಳ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಿಂದಿನ ಕಾಲದ ಋಷಿಮುನಿಗಳ ಏಕಾಗ್ರತೆಯ ತಪಸ್ಸಿನ ಭಂಗಿಯಿದು.

-ಎಂ. ದೃಶ್ಯ, ಹಾಕತ್ತೂರು, ೧೦ನೇ ತರಗತಿ., ಜ್ಞಾನಜ್ಯೋತಿ ಶಾಲೆ ಮೂರ್ನಾಡು, ಮೊ: ೯೪೮೧೨೧೩೯೨೦

ವೃಕ್ಷಾಸನ

ಕಾಲು ಬೆರಳುಗಳು ಕೆಳಮುಖವಾಗಿರ ಬೇಕು, ಮಂಡಿ ಸೊಂಟದ ನೇರಕ್ಕೆ ಇರಬೇಕು. ಬಲ ಪಾದದಿಂದ ಎಡ ತೊಡೆಯನ್ನು, ಎಡ ಪಾದದಿಂದ ಬಲ ತೊಡೆಯನ್ನು ಒತ್ತುತ್ತಿರಬೇಕು ಎರಡು ಕೈಗಳು ನೇರವಾಗಿ ಮೇಲಕ್ಕೆ ಎತ್ತಿ ನಮಸ್ಕಾರ ಸ್ಥಿತಿಯಲ್ಲಿರಬೇಕು. ಬೆನ್ನು ಮೂಳೆ, ನರಗಳನ್ನು ಬಲಪಡಿಸುತ್ತದೆ ಕಾಲಿನ ಮಂಡಿ ಹಾಗೂ ಸೊಂಟ ಬಲಗೊಳ್ಳುತ್ತದೆ. ಕಣ್ಣುಗಳ ದೃಷ್ಟಿಗೆ ತುಂಬಾ ಒಳ್ಳೆಯದು, ತಾಳ್ಮೆ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ.

-ಕಲ್ಪಿತ ಮುತ್ತಮ್ಮ ಕೆ. ಜಿ., ೧೦ನೇ ತರಗತಿ

ಶ್ರೀ ರಾಜೇಶ್ವರಿ ಸ್ಕೂಲ್, ಚೇರಂಬಾಣೆ.

ವೃಕ್ಷಾಸನ

* ಬೆನ್ನು ಮೂಳೆಯನ್ನು ಬಲಪಡಿಸು ತ್ತದೆ.

* ನರಗಳು ಬಲವಾಗುತ್ತವೆ.

* ಕಾಲಿನ ಮಂಡಿ ಹಾಗೂ ಸೊಂಟ ಬಲವಾಗುವುದು

ಕಣ್ಣುಗಳ ದೃಷ್ಟಿಗೆ ತುಂಬಾ ಒಳ್ಳೆಯದು.

* ತಾಳ್ಮೆ ಹೆಚ್ಚಿಸುವುದು, ಏಕಾಗ್ರತೆ ಹೆಚ್ಚಿಸುವುದು

ಸಮತೋಲವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದ ರಿಂದ ದೈಹಿಕ ಸಮತೋಲನವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳ ಬಹುದು.

ವೃಕ್ಷಾಸನ ಮಾಡುವಾಗ ಇಡೀ ದೇಹದ ತೂಕ ಕಾಲಿನ ಮೇಲೆ ಬೀಳುವುದರಿಂದ ಕಾಲು ಬಲಗೊಳ್ಳುತ್ತದೆ. ಇದು ಪಾದಗಳು, ಮೊಣಕಾಲು, ತೊಡೆಗಳನ್ನು ಟೋನ್ ಮಾಡುತ್ತದೆ. ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಭಂಗಿಯಲ್ಲಿ ಕೈಗಳನ್ನು ತಲೆಯ ಮೇಲೆ ಚಾಚುವುದರಿಂದ ಇದರಲ್ಲಿ ಭುಜಗಳು ಮತ್ತು ತೋಳುಗಳು ನಿರಂತರ ಕ್ರಿಯೆಯಲ್ಲಿ ತೊಡಗುತ್ತದೆ. ಇದರಿಂದ ತೋಳಿನ ಸ್ನಾಯುಗಳು ಬಲಗೊಳ್ಳುತ್ತದೆ.

-ಧೃತಿ, ನಕ್ಷತ್ ರಾಘವೇಂದ್ರ , ಐಶ್ವರ್ಯ ಪಬ್ಲಿಕ್ ಸ್ಕೂಲ್.

ಗುಡ್ಡೆಹೊಸೂರು, ಮೊ. ೯೪೮೨೩೧೭೮೪೬

ಚಕ್ರಾಸನ

ಈ ಆಸನವು ನರ ಮತ್ತು ಗ್ರಂಥಿಗಳ ವ್ಯವಸ್ಥೆಯಲ್ಲಿ ಪ್ರಯೋಜನಕಾರಿ ಯಾಗಿದೆ. ಇದು ಸಂಪೂರ್ಣವಾಗಿ ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯು ಗಳನ್ನು ವಿಸ್ತರಿಸುತ್ತದೆ. ಉಸಿರಾಟ ವನ್ನು ಸರಿಪಡಿಸುತ್ತದೆ. ಎಲ್ಲಾ ರೋಗದಿಂದ ದೂರ ಇಡುತ್ತದೆ.

-ಲವಿತ ಕೆ.ಪಿ., ೭ನೇ ತರಗತಿ

ನ್ಯಾಷನಲ್ ಅಕಾಡೆಮಿ ಶಾಲೆ, ಗೋಣಿಕೊಪ್ಪ, ಮೊ. ೭೦೨೬೮೩೭೦೭೬

ವೃಕ್ಷಾಸನ

ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದು. ಹಾಗಾಗಿ ವೃಕ್ಷಾಸನ ಎನ್ನಲಾಗುತ್ತದೆ. ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ.

-ದಿಯಾರ ಗಂಗಾ, ಯು.ಕೆ.ಜಿ, ಸಪ್ಲಿಂಗ್

ವೀರಾಜಪೇಟೆ,

ಮೊ: ೯೭೩೯೪೬೧೨೪೩

ವೃಕ್ಷಾಸನ

ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದು. ಹಾಗಾಗಿ ವೃಕ್ಷಾಸನ ಎನ್ನಲಾಗುತ್ತದೆ. ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ.

-ದಿಯಾರ ಗಂಗಾ, ಯು.ಕೆ.ಜಿ, ಸಪ್ಲಿಂಗ್

ವೀರಾಜಪೇಟೆ,

ಮೊ: ೯೭೩೯೪೬೧೨೪೩

ಪದ್ಮಾಸನ

ಇದು ಅತ್ಯಂತ ಪರಿಣಾಮಕಾರಿ ಮತ್ತು ಎಲ್ಲ ಆಸನದ ಮೂಲ ಆಸನವಾಗಿದೆ. ಇದನ್ನು ಮಾಡುವುದರಿಂದ ಆರೋಗ್ಯದ ಲಾಭಗಳನ್ನು ಪಡೆಯಬಹುದು. ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ಡೊಳ್ಳು ಹೊಟ್ಟೆ ಕಡಿಮೆ ಮಾಡುತ್ತದೆ. ಮನಸ್ಸು ಶಾಂತವಾಗಿ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಇದನ್ನು ಮಾಡುವುದರಿಂದ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಸಾಧಿಸಬಹುದು. ಯೋಗ ಅಭ್ಯಾಸ ಯೋಗ ದಿನಕ್ಕೆ ಸೀಮಿತವಾಗದೆ ಇಡೀ ವರ್ಷ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.

-ಆದರ್ಶ್ ಎಂ. ಎಚ್., ೯ನೇ ತರಗತಿ

ಸೆಂಟ್ ಎನ್ಸ್ ಸ್ಕೂಲ್, ವೀರಾಜಪೇಟೆ

ಮೊ. ೭೭೯೫೨೯೦೫೮೧

ಧನುರಾಸನ

ಧನುರಾಸನದಿಂದ ಪೂರ್ತಿ ಬೆನ್ನಿನ ಹಿಂಭಾಗಕ್ಕೆ ಬಿಗುಹು ಸಿಕ್ಕಿ ಉತ್ತಮ ವ್ಯಾಯಾಮವನ್ನು ಪಡೆಯು ತ್ತದೆ. ಇದು ಹೊಟ್ಟೆ ನೋವನ್ನು ಸಹ ಗುಣಪಡಿಸುತ್ತದೆ.

-ಕುಶಾಲಪ್ಪ ಎಂ. ಎನ್., ೧೦ನೇ ತರಗತಿ, ರೋಟರಿ ಪ್ರೌಢಶಾಲೆ,

ಬಿಟ್ಟಂಗಾಲ, ಮೊ: ೮೨೯೬೧೨೫೩೦೧ ಸೇತು ಬಂಧಾಸನ

ಈ ಆಸನ ಮಾಡುವುದ ರಿಂದ ಬೆನ್ನಿನ ಭಾಗದ ನರಗಳು ಉತ್ತಮವಾಗುವುದು, ಕೊಬ್ಬು ಕರಗುವುದು, ಅಸ್ತಮಾ, ಸಕ್ಕರೆ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಗೆ ಉತ್ತಮ ಆಸನವಿದು. ಈ ಆಸನ ಮಾಡುವುದರಿಂದ ಗೊರಕೆಯ ಸಮಸ್ಯೆ ಕ್ರಮೇಣ ಇಲ್ಲವಾಗಿಸಬಹುದು

-ಜ್ಞಾನಗಮ ಕೆ.ಜೆ., ೨ನೇ ತರಗತಿ

ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು, ಮೊ. ೯೬೮೦೫೯೪೪೦೬

ಸೇತು ಬಂಧಾಸನ

ಈ ಆಸನ ಮಾಡುವುದ ರಿಂದ ಬೆನ್ನಿನ ಭಾಗದ ನರಗಳು ಉತ್ತಮವಾಗುವುದು, ಕೊಬ್ಬು ಕರಗುವುದು, ಅಸ್ತಮಾ, ಸಕ್ಕರೆ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಗೆ ಉತ್ತಮ ಆಸನವಿದು. ಈ ಆಸನ ಮಾಡುವುದರಿಂದ ಗೊರಕೆಯ ಸಮಸ್ಯೆ ಕ್ರಮೇಣ ಇಲ್ಲವಾಗಿಸಬಹುದು

-ಜ್ಞಾನಗಮ ಕೆ.ಜೆ., ೨ನೇ ತರಗತಿ

ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು, ಮೊ. ೯೬೮೦೫೯೪೪೦೬ಪದ್ಮಾಸನ

ಯೋಗ ಮಾಡುವುದರಿಂದ ನಾವುಗಳು ಏಕಾಗ್ರತೆ ಹಾಗೂ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು..

-ಹಂಸಿಕ ರಾಜ್. ಪಿ. ಎ., ೨ನೇ ತರಗತಿ

ಸೆಂಟ್ ಮೈಕಲ್ ಸ್ಕೂಲ್, ಮಡಿಕೇರಿ.

ಪದ್ಮಾಸನ

‘‘ಪದ್ಮ’’ ಎಂದರೆ ಕಮಲ ಎಂದಾಗುತ್ತದೆ. ಈ ಆಸನದ ಭಂಗಿ ಕಮಲಕ್ಕೆ ಹೋಲುತ್ತದೆ. ಇದು ಅತ್ಯಂತ ಪರಿಣಾಮಕಾರಿ ಹಾಗೂ ಮೂಲ ಆಸನವೂ ಹೌದು. ಯೋಗಾಸನಕ್ಕೆ ಉತ್ತಮ ಆಸನ ಕೂಡ ಹೌದು. ವ್ಯಾದಿವಿನಾಸಕ, ಡೊಳ್ಳು ಹೊಟ್ಟೆಯನ್ನು ಕರಗಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ತೊಡೆಗಳ ಕೊಬ್ಬಿನ ಅಂಶಗಳನ್ನು ಇಳಿಸುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. - ಸಾತ್ವಿಕ, ೨ನೇ ತರಗತಿ, ಬಿ.ಶೆಟ್ಟಿಗೇರಿ,

ವೀರಾಜಪೇಟೆ. ಮೊ: ೯೪೮೦೨೨೦೩೦೬