ಸಿದ್ದಾಪುರ, ಜೂ. ೨೬: ಕೊಳೆತ ಸ್ಥಿತಿಯಲ್ಲಿ ಕಾಡಾನೆಯ ಮೃತದೇಹ ನೆಲ್ಲಿಹುದಿಕೇರಿ ಸಮೀಪದ ಸಂಪಿಗೆಕೊಲ್ಲಿ ಕಾಟಿಬಾಣೆ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಸ್ಥಳೀಯ ಕಾರ್ಮಿಕನೋರ್ವ ದನ ಮೇಯಿಸಲು ತೆರಳಿದ್ದ ಸಂದರ್ಭ ಕೊಳೆತ ಸ್ಥಿತಿಯಲ್ಲಿ ಕಾಡಾನೆಯ ಮೃತ ದೇಹ ಕಂಡುಬAದಿದ್ದು, ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾನೆ.

ತೋಟದ ಮಾಲೀಕರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ವನ್ಯ ಜೀವಿ ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆಯು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದು, ಅಂದಾಜು ೩೦ ವರ್ಷ ಪ್ರಾಯದ ಹೆಣ್ಣಾನೆ ಎಂದು ಪತ್ತೆಹಚ್ಚಲಾಗಿದೆ.