ಮಡಿಕೇರಿ, ಜೂ. ೨೬: ಕರ್ನಾಟಕ ಗಾಲ್ಫ್ ಅಸೋಸಿಯೇಷನ್ನ ಸುವರ್ಣ ಮಹೋ ತ್ಸವದ ಅಂಗವಾಗಿ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಲವು ಕ್ರೀಡಾಪಟುಗಳನ್ನು ಸನ್ಮಾನಿ ಸಲಾಯಿತು.
ಬೆಂಗಳೂರಿನ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಕ್ರೀಡಾತಾರೆಗಳಾದ ಜೋತ್ಸಾö್ನ ಚಿಣ್ಣಪ್ಪ, ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ ಹಾಗೂ ಪದ್ಮಶ್ರೀ ಡಾ.ಎಂ.ಪಿ. ಗಣೇಶ್ ಅವರುಗಳು ಸನ್ಮಾನ ಸ್ವೀಕರಿಸಿದರು. ಮತ್ತೋರ್ವ ಕ್ರೀಡಾಪಟು ಕೊಡಗಿನವರಾದ ರೋಹನ್ ಬೋಪಣ್ಣ ಅವರನ್ನು ಸನ್ಮಾನಕ್ಕೆ ಪರಿಗಣಿಸಲಾಗಿತ್ತಾದರೂ ಅವರು ಬೇರೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವದರಿAದ ಹಾಜರಾಗಿರಲಿಲ್ಲ. ಜಿ.ಆರ್. ವಿಶ್ವನಾಥ್, ವೆಂಕಟೇಶ್ ಪ್ರಸಾದ್, ಪ್ರಕಾಶ್ ಪಡುಕೋಣೆ, ಆದಿತಿ ಅಶೋಕ್ ಅವರಂತಹ ಖ್ಯಾತ ಕ್ರೀಡಾಪಟುಗಳನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿತ್ತು. ಅದರಲ್ಲೂ ಸ್ಕಾ÷್ವಷ್ ತಾರೆ ಜೋತ್ಸಾö್ನ ಚಿಣ್ಣಪ್ಪ ಅವರಿಗೆ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಸನ್ಮಾನ ದೊರೆತಿರುವುದು ವಿಶೇಷವಾಗಿದೆ.
ಗಾಲ್ಫ್ ಅಸೋಸಿಯೇಷನ್ ಅಧ್ಯಕ್ಷರಾದ ಪೃಥ್ವಿರಾಜ್ ಅರಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಚಿತ್ರದಲ್ಲಿ ಕೊಡಗಿನವರಾದ ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ ಹಾಗೂ ಜೋತ್ಸಾö್ನ ಒಟ್ಟಿಗೆ ಸಂಭ್ರಮಿಸಿದರು. ಮತ್ತೊಂದು ಚಿತ್ರದಲ್ಲಿ ಡಾ. ಎಂ.ಪಿ. ಗಣೇಶ್ ಹಾಗೂ ಜೋತ್ಸಾö್ನ ಚಿಣ್ಣಪ್ಪ ಅವರಿದ್ದಾರೆ.