ಸೋಮವಾರಪೇಟೆ, ಜೂ. ೨೬: ತಾಲೂಕಿನ ಶನಿವಾರಸಂತೆ ಸಮೀಪದ ಗೋಪಾಲ ಪುರದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕುಣಿಗಲ್‌ನಲ್ಲಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾಗಿ ಜಿಲ್ಲೆಯ ಯುವಕನೋರ್ವ ದುರ್ಮರಣ ಕ್ಕೀಡಾಗಿರುವ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಶನಿವಾರಸAತೆ ಸಮೀಪದ ಗೋಪಾಲಪುರ ನಿವಾಸಿ ಚಂದ್ರಶೇ ಖರ್ ಹಾಗೂ ಮಂಗಳ ದಂಪತಿ ಪುತ್ರ, ಚೇತನ್ (೨೯) ಎಂಬವರೇ ಮೃತ ದುರ್ದೈವಿ. ಪತ್ನಿ ಜಯಂತಿ ಹಾಗೂ ಒಂದೂವರೆ ವರ್ಷದ ಮಗುವಿನೊಂದಿಗೆ ಗೋಪಾಲಪುರ ದಿಂದ ನಿನ್ನೆ ದಿನ ಬೆಂಗಳೂರಿಗೆ ತೆರಳುವ ಸಂದರ್ಭ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿ ರುವ ಚೇತನ್, ನಿನ್ನೆ ದಿನ ಗೋಪಾ ಲಪುರಕ್ಕೆ ಆಗಮಿಸಿ, ನಂತರ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ಕುಣಿಗಲ್‌ನ ಗೊಟ್ಟಿಕೆರೆಯಲ್ಲಿ ಆಕಸ್ಮಿಕವಾಗಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಚೇತನ್‌ಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕುಣಿಗಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿ ಸಲಾಗಿದ್ದು, ಗೋಪಾಲಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಘಟನೆ ಸಂದರ್ಭ ಕಾರಿನೊಳಗಿದ್ದ ಪತ್ನಿ ಜಯಂತಿ ಹಾಗೂ ಒಂದೂವರೆ ವರ್ಷ ಪ್ರಾಯದ ಪುತ್ರ ವಿಹಾನ್ ಅವರುಗಳಿಗೂ ತೀವ್ರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.