ಪೊನ್ನಂಪೇಟೆ, ಜೂ. ೨೫: ಯಾವುದೇ ಹಿಂದುಳಿದ ಜನಾಂಗಗಳು ಸಾಮಾಜಿಕವಾಗಿ ಸಬಲೀಕರಣ ಗೊಳ್ಳಲು ರಾಜಕೀಯ ಸ್ಥಾನಮಾನಗಳ ಅಗತ್ಯವಿದೆ. ಹಿಂದುಳಿದ ಜನಾಂಗಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಆಧಾರದಲ್ಲಿ ರಾಜಕೀಯ ಸ್ಥಾನಮಾನ ಗಳನ್ನು ನೀಡಿ ಅವರನ್ನು ಮೇಲೆತ್ತು ವುದು ಆಡಳಿತ ಪಕ್ಷದ ಹೊಣೆಗಾ ರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡ ಗಿನ ಕೊಡವ ಮುಸ್ಲಿಂ ಜನಾಂಗಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಕೊಡವ ಮುಸ್ಲಿಂ ಅಸೋಸಿ ಯೇಷನ್ (ಕೆ.ಎಂ.ಎ.) ಒತ್ತಾಯಿಸಿದೆ.

ಈ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಎಚ್. ಸೂಫಿ ಹಾಜಿ, ಅಲ್ಪಸಂಖ್ಯಾತರಲ್ಲಿ ಸೂಕ್ಷö್ಮ ಅಲ್ಪಸಂಖ್ಯಾತರಾಗಿರುವ ಕೊಡವ ಮುಸ್ಲಿಂ ಜನಾಂಗದ ಸಾಮಾಜಿಕ ಏಳಿಗೆ ಗಾಗಿ ಇಂದು ರಾಜಕೀಯ ಸ್ಥಾನಮಾ ನಗಳ ಅಗತ್ಯ ಎಂದೆAದಿಗಿAತಲೂ ಇದೆ. ಆದರೆ ಇದನ್ನು ಬೇಡಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜಿಲ್ಲೆಯ ಎರಡೂ ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೊಡವ ಮುಸ್ಲಿಂ ಜನಾಂಗವನ್ನು ಸರ ಕಾರ ಈ ಹಿಂದಿನAತೆ ನಿರ್ಲಕ್ಷಿಸ ಬಾರದು ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಬದ್ಧತೆ ಹೊಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಈ ಒತ್ತಾಯವನ್ನು ಮುಂದಿಡಲಾಗಿದೆ ಎಂದು ವಿವರಿಸಿದ ಸೂಫಿ ಹಾಜಿ, ಅರ್ಹರಿಗೆ ಸೂಕ್ತ ರಾಜಕೀಯ ಸ್ಥಾನ ಮಾನಗಳನ್ನು ನೀಡಿದರೆ ಅದು ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೂ ನೆರವಾಗುತ್ತದೆ ಎಂದು ಹೇಳಿದರು.

ಕೊಡವ ಮುಸ್ಲಿಂ ಜನಾಂಗದಲ್ಲಿ ಅರ್ಹ ರಾಜಕೀಯ ಪ್ರಮುಖರಿದ್ದು, ಇವರಿಗೆ ಸೂಕ್ತ ರಾಜಕೀಯ ಸ್ಥಾನಮಾ ನಗಳನ್ನು ನೀಡಬೇಕು ಎಂದು ಒತ್ತಾ ಯಿಸಿ ಜಿಲ್ಲೆಯ ಇಬ್ಬರೂ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಸಂಸ್ಥೆಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಗಿದೆ. ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಬಾಯಿ ಮಾತಿನ ಭರವಸೆಯನ್ನು ಇವರು ಈಡೇರಿಸು ತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇವೆ. ಈ ಬಗ್ಗೆ ಶೀಘ್ರದಲ್ಲೇ ಸಂಸ್ಥೆಯ ಪ್ರಮುಖರ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಉಪಾಧ್ಯಕ್ಷ ಡಾ. ಜೆ.ಎ. ಕುಞೆ ಅಬ್ದುಲ್ಲಾ ಅವರು ಮಾತನಾಡಿದರು. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಅಕ್ಕಳತಂಡ ಎಸ್. ಮೊಯ್ದು, ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ) ಉಪಸ್ಥಿತರಿದ್ದರು.