ದೇವರು “ಶತಮಾನಮ್ ಭವತಿ ಶತಾಯುಃ ಪುರುಷ” ಎಂದು ಆಶೀರ್ವದಿಸಿ ಮನುಷ್ಯನು ಸಂತೋ ಷದಿಂದ, ನೆಮ್ಮದಿಯಿಂದ ಬದುಕಲು ದೀರ್ಘ ಬದುಕು ಮತ್ತು ನೈಸರ್ಗಿಕ ಸಂಪತ್ತನ್ನು ಕೊಟ್ಟಿದ್ದರೂ ಅದನ್ನು ಅನುಭವಿಸದೆ ಕೆಲವರು ಮಾದಕ ವಸ್ತುಗಳ ಸೇವನೆಗೆ ಬಲಿಯಾಗಿ ಬದು ಕನ್ನು ಬರ್ಬರಗೊಳಿಸಿಕೊಳ್ಳುತ್ತಿರು ವುದು ನಿಜಕ್ಕೂ ದುರ್ದೈವದ ವಿಷಯ ಎನ್ನಬಹುದು. ಮುರಿಜುವಾನ, ಓಪಿಯಮ್, ಗಾಂಜಾ, ಎಲ್ ಎಸ್ ಡಿ ಮುಂತಾದ ಹಲವಾರು ತೀವ್ರ ಅಪಾಯಕಾರಿ ಮತ್ತುಬರಿಸುವ ಸೇವನೆಗಳನ್ನು ಬಳಸುವವನಿಗೆ ತಾತ್ಕಾ ಲಿಕ ಆಮೋದವನ್ನು ನೀಡಿದರೂ ತಮ್ಮ ಕಬಂಧ ಬಾಹುಗಳ ಕಪಿ ಮುಷ್ಟಿಯಿಂದ ಸೇವನೆಗೊಳಗಾದ ವನನ್ನು ಸೆರೆಹಿಡಿದು ಅವನ ಬದು ಕನ್ನೇ ಕೆಡಿಸಿಬಿಡುತ್ತವೆ. ಮನುಷ್ಯನ ಬದುಕನ್ನು ಕೆಡಿಸುವ ಈ ಮಾದಕ ವಸ್ತುಗಳ ಸೇವನೆ ಮತ್ತು ಸಾಗಣಿಕೆಯ ವಿರುದ್ಧ ಜನ ಜಾಗೃತಿಯನ್ನು ಮೂಡಿ ಸಲು ವಿಶ್ವಸಂಸ್ಥೆಯು ಪ್ರತಿ ಜೂನ್ ತಿಂಗಳ ೨೫ರ ದಿನದಂದು ಮಾದಕ ದ್ರವ್ಯ ಸೇವನೆ ಮತ್ತು ಸಾಗಣಿಕೆ ತಡೆ ದಿನಾಚರಣೆಯನಾಗಿ ಆಚರಿಸಿ ಜನರಲ್ಲಿ ಇಂತಹ ಮಾದಕ ದ್ರವ್ಯಗಳ ಬಳಕೆಯ ವಿರುದ್ಧ ಜಾಗೃತಿಯನ್ನು ಮೂಡಿಸಲು ಯತ್ನಿಸುತ್ತಿದೆ. ಪ್ರತಿ ವರ್ಷವೂ ಒಂದು ಚಿತ್ತಾಕರ್ಷಕ ಉದ್ಘೋಷವನ್ನು ಹೊರಡಿಸಿ ಮಾದಕ ವಸ್ತುಗಳ ಸೇವನೆಯಿಂದ ತಮಗೂ ಮತ್ತು ಸಮಾಜಕ್ಕೂ ಆಗುವ ಆಘಾತ ಗಳ ಬಗ್ಗೆ ತಿಳಿವನ್ನು ಮೂಡಿಸುತ್ತಿದೆ.

ಯಾವುದೇ ಕಾನೂನುಬಾಹಿರ ವಾದ ಔಷಧಗಳ ಸೇವನೆ, ಅವುಗಳ ಸಾಗಾಣಿಕೆ ಮತ್ತು ಅವುಗಳ ವ್ಯಾಪಾರ ಇವುಗಳನ್ನು ಮಾದಕ ಪದಾರ್ಥಗಳ ದುರುಪಯೋಗ ಎಂದು ಪರಿಗಣಿಸ ಲಾಗುತ್ತದೆ. ಇಂತಹ ಅಪಾಯಕಾರೀ ಔಷಧಿಗಳ ಬಳಕೆಯಿಂದ ದೇಹದ ಸ್ವಾಭಾವಿಕ ನಿರೋಧಕ ಶಕ್ತಿಯು ಕುಸಿತಗೊಂಡು ಹಲವಾರು ಆಕಸ್ಮಿಕ ಗಳಿಗೆ ಕಾರಣವಾಗುತ್ತದೆ. ಇಂತಹ ಮಾದಕ ವಸ್ತುಗಳ ಸೇವನೆಯನ್ನು ಮಾಡಿದವನು ಬದುಕಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ಸದಾ ಖಿನ್ನತೆಯಲ್ಲಿ ಇರುವಂತೆ ತೋರು ತ್ತಾನೆ. ಸಾಮಾನ್ಯವಾಗಿ ಕಲಿಕೆಯ ಹಂತದಲ್ಲಿ ಇರುವ ಪ್ರೌಢ ವಿದ್ಯಾರ್ಥಿ ಗಳು ಇದರ ಆಕರ್ಷಣೆಗೆ ಒಳಗಾಗಿ ಬದುಕನ್ನು ಕೆಡಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸದಲ್ಲಿ ತೀವ್ರ ಅನಾಸಕ್ತಿ ಹಾಗೂ ತಾವು ಧರಿಸುವ ವಸ್ತçಗಳ ಬಗ್ಗೆ ನಿರ್ಲಕ್ಷö್ಯ ಇವು ಪ್ರಾಥಮಿಕ ಹಂತದಲ್ಲಿ ಮಾದಕ ವಸ್ತುಗಳನ್ನು ಬಳಸುವವರಲ್ಲಿ ಗೋಚರಿಸುತ್ತದೆ. ಅದೆಷ್ಟೇ ಹಣವನ್ನು ತೆತ್ತಾದರೂ ಸರಿ, ತಾವಿದನ್ನು ಕೊಂಡುಕೊಳ್ಳುತ್ತೇವೆ ಮತ್ತು ಬಳಸುತ್ತೇವೆ ಎನ್ನುವ ಹಠಕ್ಕೆ ಬೀಳುವ ವಿದ್ಯಾರ್ಥಿಗಳು ಹಣದ ಕೊರತೆಯಾದಾಗ ಮನೆಯಲ್ಲಿ ಹಣವನ್ನು ಕಳುವು ಮಾಡಿ ಈ ಅಮಲು ಪದಾರ್ಥಗಳನ್ನು ಕೊಳ್ಳು ವರು. ಹಣವು ದೊರೆಯದಿದ್ದಾಗ ಮನೆಯಲ್ಲಿರುವ ವಸ್ತುಗಳನ್ನು ಕದ್ದು ಬಹಳ ಅಗ್ಗಕ್ಕೆ ಮಾರಿ ತಮ್ಮ ತೆವಲನ್ನು ತೀರಿಸಿಕೊಳ್ಳುತ್ತಾರೆ.

ಆರಂಭದ ಹಂತದಲ್ಲಿ ಗಾಂಜಾ ಎನ್ನುವ ಪ್ರತಿಬಂಧಿತ ಸಸ್ಯದ ಎಲೆಯನ್ನು ಸಿಗರೇಟು, ಬೀಡಿಗಳ ಒಳಗೆ ತುಂಬಿ ಅದನ್ನು ಸೇದಿ ಯಾವುದೋ ಜಗತ್ತಿಗೆ ಹೋದಂತಹ ಭ್ರಮೆಗೆ ಸೇವಿಸುವವರು. ಯಾರೋ ತಮ್ಮನ್ನು ಕರೆದಂತೆ ವೈಚಿತ್ರö್ಯಕ್ಕೆ ಒಳಗಾಗುತ್ತಾರೆ. ಒಮ್ಮೆ ಈ ಚಟಕ್ಕೆ ಬಿದ್ದರೆ ಸಾಕು, ಅನಂತರ ಇದನ್ನು ಪದೇ ಪದೇ ಸೇವಿಸಲೇಬೇಕು ಎನ್ನುವ ಬಯಕೆಯು ಅವರಲ್ಲಿ ಮೂಡುತ್ತದೆ. ಇದು ಒಮ್ಮೆ ಅಭ್ಯಾಸವಾಗಿ ಹೋದರೆ ಅನಂತರ ದಿನಕ್ಕೊಮ್ಮೆಯಾದರೂ ಇದು ಸಿಗದಿದ್ದರೆ ಅವರ ಅತೃಪ್ತ ಬಯಕೆಗಳು ಗರಿಕೆದರಿಬಿಡುತ್ತವೆ. ನೆಲದಲ್ಲಿ ಬಿದ್ದು ಹೊರಳಾಡುವುದು, ರಾತ್ರಿ ನಿದ್ರೆಯನ್ನೇ ಮಾಡದಿರುವುದು, ಒಬ್ಬರೇ ಮಾತನಾಡುವುದು ಮೊದ ಲಾದ ಅನೈಸರ್ಗಿಕ ಕ್ರಿಯೆಗಳಿಗೆ ಅವರು ಶರಣಾಗಿಬಿಡುತ್ತಾರೆ. ಈ ಸಮ ಯದಲ್ಲಿ ಇವರಿಗೆ ಮಾನಸಿಕ ವೈದ್ಯರಿಂದ ಚಿಕಿತ್ಸೆಯನ್ನು ನೀಡಲೇ ಬೇಕಾಗುತ್ತದೆ. ಚಿಕಿತ್ಸೆಯು ತಡವಾ ದಷ್ಟೂ ಸಮಸ್ಯೆಯು ತೀವ್ರಗತಿಗೆ ಹೋಗಿ ಕೊನೆಗೆ ಮರಣವೂ ಸಂಭ ವಿಸಬಹುದು. ಈ ಮಾದಕವಸ್ತುಗಳ ಸಾಗಾಣಿಕೆ ಮತ್ತು ಮಾರಾಟವು ಪ್ರಪಂಚದ ಬಹುತೇಕ ಎಲ್ಲ ಕಡೆಗಳಲ್ಲೂ ನಡೆಯುತ್ತಿವೆ. ಕೆಲವು ಅರಬ್ ದೇಶಗಳಲ್ಲಿ ಇಂತಹ ಕೃತ್ಯವನ್ನು ಎಸಗುವವರಿಗೆ ಮರಣ ದಂಡನೆಯAತಹ ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಆದರೂ ಈ ದಂಧೆಯಿAದ ದೊರೆಯುವ ಅಪರಿ ಮಿತ ಲಾಭದಿಂದ ಮಾದಕ ವಸ್ತುಗಳ ಸಾಗಾಣಿಕೆಯು ನಿರಂತರವಾಗಿ ಎಲ್ಲೆಡೆಯಲ್ಲಿಯೂ ಎಗ್ಗಿಲ್ಲದೆ ನಡೆಯುತ್ತಲೇ ಇದೆ.

ಕೊಡಗು ಜಿಲ್ಲೆಯೂ ಈ ಪಿಡುಗಿನ ಕಪಿಮುಷ್ಟಿಯಿಂದ ಹೊರತಾಗಿಲ್ಲ. ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಅಲ್ಲದೆ ಗಣ್ಯರ ಸೋಗು ಹಾಕಿ ಮೆರೆಯುವ ಶ್ರೀಮಂತ ವರ್ಗದವರೂ ಈ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದಾರೆ. ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಕೊಡಗಿನಲ್ಲಿ ಗಾಂಜಾ ಸಾಗಾಟದ ವರದಿಗಳು ಬರುತ್ತಲೇ ಇವೆ. ಇದರಲ್ಲಿ ಭಾಗಿಯಾದವರು ಪೊಲೀಸರಿಗೆ ಸಿಕ್ಕಿಬಿದ್ದರೂ ಗುಟ್ಟಾಗಿ ಈ ದಂಧೆಯು ಇನ್ನಷ್ಟು ತೀವ್ರಗತಿ ಯನ್ನು ಪಡೆದುಕೊಳ್ಳುತ್ತಲೇ ಇದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತಾಳುತ್ತಿರಲೇ ಬೇಕು. ತಮ್ಮ ಮಕ್ಕಳಿಗೆ ಅಗತ್ಯ ಕ್ಕಿಂತಲೂ ಹೆಚ್ಚಿನ ಹಣವನ್ನು ಕೊಡ ಲೇಬಾರದು. ಅಲ್ಲದೆ ಅವರು ಬೆರೆಯುತ್ತಿರುವ ವ್ಯಕ್ತಿಗಳ ಬಗ್ಗೆ ಹದ್ದಿನ ಕಣ್ಣು ಇರಿಸಬೇಕು. ಮಕ್ಕಳ ನಡತೆಯಲ್ಲಿ, ನಡವಳಿಕೆಯಲ್ಲಿ ತುಸು ವ್ಯತ್ಯಾಸ ಕಂಡುಬAದರೂ ಆ ಬಗ್ಗೆ ತೀವ್ರ ತಪಾಸಣೆ ಮಾಡಬೇಕು. ತಮ್ಮ ಮಕ್ಕಳು ತುಂಬ ಯೋಗ್ಯರು ಎಂದೂ ಕೆಟ್ಟ ಚಟಕ್ಕೆ ಬಲಿಯಾಗುವುದಿಲ್ಲ ಎನ್ನುವ ನಂಬಿಕೆಯಿAದ ಹೊರ ಬಂದು ಮಕ್ಕಳ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು.

ಒಟ್ಟಿನಲ್ಲಿ ಬದುಕನ್ನು ಕಂಗೆಡಿ ಸುವ, ಅನುಭವಿಸಬೇಕಾದ ಸಕಲ ಸೌಭಾಗ್ಯಗಳನ್ನು ಎಳವೆಯಲ್ಲಿಯೇ ಕೆಡಿಸಿಹಾಕುವ ಈ ದುಷ್ಚಟದ ಬಗ್ಗೆ ಎಲ್ಲ ಸ್ತರದ ಜನರೂ ಜಾಗೃತಿಯನ್ನು ವಹಿಸಿ ಬುಡದಿಂದಲೇ ಕಿತ್ತುಹಾಕ ಬೇಕಾಗಿದೆ. ಆಗಮಾತ್ರ ಈ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾ ಣಿಕೆಯ ತಡೆಯ ಬಗ್ಗೆ ವರ್ಷಕ್ಕೊಮ್ಮೆ ನಡೆಸುವ ದಿನಾಚರಣೆಗೆ ಅರ್ಥ ಬರುತ್ತದೆ, ದೇಶದ ಮುಂದಿನ ಪ್ರಜೆಗಳ ಭವಿಷ್ಯ ಬಲ ಗೊಳ್ಳುತ್ತದೆ.

ಕಿಗ್ಗಾಲು ಎಸ್ ಗಿರೀಶ್ ಮೂರ್ನಾಡು

(೯೧೪೧೩ ೯೫೪೨೬)