ಮಡಿಕೇರಿ, ಜೂ. ೨೫: ಐಗೂರು, ಯಸಳೂರು ಮತ್ತು ಬಿಳಿಗೇರಿಯಲ್ಲಿರುವ ಸಾಂಬಾರ ಮಂಡಳಿಯ ಇಲಾಖಾ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಸಾಂಬಾರ ನಾಟಿ ಸಸಿಗಳು ಲಭ್ಯವಿದೆ. ಕೊಡಗು ಜಿಲ್ಲೆಯ ರೈತರು ಈ ಹಂಗಾಮಿನಲ್ಲಿ ನಾಟಿ ಮಾಡಲು ಸಸಿಗಳನ್ನು ಪಡೆಯಬಹುದು. ಪ್ರತಿ ಚಿಕ್ಕ ಏಲಕ್ಕಿ ಬೀಜ ರೂ. ೧೫, ಪ್ರತಿ ಏಲಕ್ಕಿ ಕ್ಲೋನಲ್ ಸಕ್ಕರ್ ರೂ. ೫೦, ಬ್ಲಾಕ್ ಪೆಪ್ಪರ್ ರೂಟೆಡ್ ಕಟಿಂಗ್ಸ್ ರೂ. ೭ ಮತ್ತು ಕರಿಮೆಣಸು ನ್ಯೂಕ್ಲಿಯಸ್ ಮೆಟಿರಿಯಲ್ ರೂ. ೨೦. ಐಗೂರು ಸ್ಪೆöÊಸಸ್ ಬೋರ್ಡ್ನ ನರ್ಸರಿಯ ಫಾರ್ಮ್ ವ್ಯವಸ್ಥಾಪಕರು-೯೭೪೫೨೯೫೪೭೦, ಯಸಳೂರು ಸಾಂಬಾರ ಮಂಡಳಿ ಇಲಾಖಾ ನರ್ಸರಿಯ ವ್ಯವಸ್ಥಾಪಕರು ೮೩೧೦೨೦೮೯೪೦ ಹಾಗೂ ಬಿಳಿಗೇರಿ ಸಾಂಬಾರ ಮಂಡಳಿ ಇಲಾಖೆಯ ನರ್ಸರಿಯ ವ್ಯವಸ್ಥಾಪಕರು ೯೪೮೦೨೪೯೪೯೭/ ೮೨೮೧೩೭೬೨೬೫ನ್ನು ಸಂಪರ್ಕಿಸಬಹುದು ಎಂದು ಸಾಂಬಾರ ಮಂಡಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.