ನಾಪೋಕ್ಲು, ಜೂ. ೨೪: ಇಲ್ಲಿಗೆ ಸಮೀಪದ ಕಕ್ಕಬೆಯ ನಾಲಡಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮುಂಬೈನಲ್ಲಿ ಉದ್ಯೋಗ ದಲ್ಲಿರುವ ನೆಲಜಿ ಗ್ರಾಮದ ಆಶೀಶ್ ರಾವ್ ನೋಟು ಪುಸ್ತಕ ಕೊಡುಗೆಯಾಗಿ ನೀಡಿದರು.

ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ನೋಟು ಪುಸ್ತಕ ವಿತರಿಸಲು ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಅವರಿಗೆ ಹಸ್ತಾಂತರಿಸಿದ್ದರು. ಈ ನೋಟು ಪುಸ್ತಕಗಳನ್ನು ಗುರುವಾರ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕರಾದ ರಜಿನ, ಸಾರಿಕಾ, ಸಂಜು ಉಪಸ್ಥಿತರಿದ್ದರು.