ಮನುಷ್ಯ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿ ರುತ್ತಾನೆ. ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ. ಇಂತಹ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ.
ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಕಂಡುಬರುವ ಒಂದು ದೊಡ್ಡ ಪಿಡುಗು. ಯಾವುದೇ ತರಹದ ಲಿಂಗ ಭೇದವಿಲ್ಲದೆ ಎಲ್ಲೆಡೆಯೂ ಕಂಡು ಬರುತ್ತದೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ ಮದ್ಯ, ತಂಬಾಕು, ಗಾಂಜಾ, ಕೊಕೇನ್, ಓಪಿಯಮ್, ಆಂಫಿಟ್‌ಮೈನ್, ಹೆರಾಯಿನ್, ಎಲ್.ಎಸ್.ಡಿ, ಪಿ.ಸಿ.ಪಿ, ನಿದ್ದೆ ಮಾತ್ರೆಗಳು ಮುಂತಾದವುಗಳು ಇಂತಹ ಸ್ಥಿತಿಯನ್ನು ಪುನರಾವರ್ತಿಸುವ ಚಟ. ಈ ಡ್ರಗ್ಸ್ಗಳಲ್ಲಿ ಅನೇಕ ಗುಂಪುಗಳಿವೆ. ಟ್ರಾಂಕ್ವಿಲೈಸರ್, ಎನ್‌ರೈಸರ್ ಮತ್ತು ಸೈಕೋಮಿಮೆಟಿಕ್ ಎಂಬುದಾಗಿ ಮೂರು ಗುಂಪುಗಳಿವೆ. ಎಲ್.ಎಸ್.ಡಿ ಹೆಯಾಯಿಸ್ ನಾರೆಟಿಕ್ ಗುಂಪಿಗೆ ಸೇರಿದವು. ಇಂಥ ವಸ್ತುಗಳು ಕಳ್ಳ ಸಾಗಾಣೆ ಮತ್ತು ಸೇವನೆ ಅಪಾಯದ ಮಟ್ಟದಲ್ಲಿ ಬೆಳೆದಿದೆ. ಅತಿಯಾದರೆ ಅಮೃತವೂ ವಿಷವೇ.
ಮಾದಕ ವಸ್ತುಗಳ ಚಟವು ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸಮಾಜದಲ್ಲಿ ಕಾಡುತ್ತಿರುವ ಚಟಗಳಲ್ಲಿ ಮುಖ್ಯವಾದವೇ ಡ್ರಗ್ಸ್/ಮಾದಕ ವಸ್ತು ಸೇವನೆ. ಇಂತಹವುಗಳನ್ನು ಸೇವಿಸುವುದರಿಂದ ಸಮಾಜವು ಒಪ್ಪಿಕೊಂಡಿರುವ ರೀತಿ ಮತ್ತು ನೀತಿಗಳ ವಿಷಯಗಳಲ್ಲೂ ವಿಮುಖನಾಗುವಂತೆ ಇಂತಹ ಪದಾರ್ಥಗಳು ಮಾಡುತ್ತದೆ. ಇದರ ಸೇವನೆಯು ಅಮಲು ಆನಂದವನ್ನು ಕೆಲವು ನಿಮಿಷಗಳ ಸಹ ನೀಡಿದರೂ ಅವನ ಜೀವನವನ್ನು ಎಲ್ಲಾ ರೀತಿಯಲ್ಲೂ ಹಾಳು ಮಾಡುತ್ತದೆ ಎಂದು ಹೇಳಬಹುದು. ಅಮಲು ಎಂಬುದು ಒಂದು ವಿಷ ಎಂದು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಅನೇಕ ಕಾರಣಗಳಿಂದ ಇಂತಹ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಡ್ರಗ್ ಸೇವನೆಯಿಂದ ಉಂಟಾಗುವ ಪರಿಣಾಮಗಳನ್ನು ಸೈಕೇಡಿಲಿಕ್ ಅನುಭವ ಗಳೆಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಹೊಸದಾಗಿ ಬಲಿಯಾಗ ದಂತೆ ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಯುವ ಜನತೆ ಮತ್ತು ವಿದ್ಯಾರ್ಥಿಗಳು ಸಾಕಷ್ಟು ಎಚ್ಚರಿಕೆ ವಹಿಸಿ ಬೇರೆಯವರನ್ನು ಎಚ್ಚರಿಸಬೇಕು. ಇಂತಹ ದುಶ್ಚಟಗಳಿಗೆ ಬಲಿಯಾಗಿರುವವರನ್ನು ಪ್ರೀತಿ-ವಿಶ್ವಾಸಗಳಿಂದ ಅನುಕಂಪವನ್ನು ತೋರಿ, ಅವರನ್ನು ಸರಿದಾರಿಗೆ ತರಬೇಕು.
ಸಮಾಜ ಜಾಗೃತಿಯ ಕೆಲಸವನ್ನು ವೈಯಕ್ತಿಕವಾದ ಶ್ರದ್ಧೆಗಳು, ಮಾನವೀಯ ದೃಷ್ಟಿಕೋನಗಳು, ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೆರವಾಗುತ್ತದೆ. ಡ್ರಗ್ ಸೇವನೆಯಿಂದ ಮನೋರೋಗಗಳು, ಮನೋ ದೌರ್ಬಲ್ಯ ಉಂಟಾಗುತ್ತದೆ. ಸಾವು ಸಂಭವಿಸಿದರೂ ಆಶ್ಚರ್ಯವೇನಿಲ್ಲ.
ಮುಕ್ಕಾಟಿ ಹರಿಣಿ ಗಿರೀಶ್
ಮರಗೋಡು