ಕೂಡಿಗೆ, ಜೂ. ೨೪: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಾಯಕ್ಕೆ ನೀರು ಒದಗಿಸುವುದು, ಸೇರಿದಂತೆ ಹಾಸನ ಮತ್ತು ಮೈಸೂರು ಜಿಲ್ಲೆಯ ಸಾವಿರಾರು ಎಕರೆಗಳಷ್ಟು ಪ್ರದೇಶಗಳಿಗೆ ನೀರು ಹರಿಸುವ ಮುಖ್ಯ ನಾಲೆಯ ದುರಸ್ತಿ ಕೆಲಸ ಆರಂಭಗೊAಡಿವೆ. ಅನೇಕ ವರ್ಷಗಳಿಂದ ದುರಸ್ತಿಕಾಣದೆ ನಾಲೆಯ ಒಳಗೆ ಹೂಳು ತುಂಬಿಕೊAಡಿತ್ತು. ಇದೀಗ ಹೂಳು ತೆಗೆಯುವ ಕಾಮಗಾರಿಯ ಮತ್ತು ಗಿಡ ಗಂಟಿಗಳ ಕಡಿತ ಹಾಗೂ ನಾಲೆಯ ಅಂಚಿನ ಒಣಗಿದ ಮರಗಳು ನಾಲೆಗೆ ಬಿದ್ದಿದನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಮುಖ್ಯ ನಾಲೆಯಲ್ಲಿ ಹೂಳು ತುಂಬಿಕೊAಡಿದರಿAದಾಗಿ ನೀರಿನ ಹರಿಯುವಿಕೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇದರಿಂದಾಗಿ ಕೊನೆಯ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಯ ನೀರು ಸಮರ್ಪಕವಾಗಿ ದೊರಕುತ್ತಿರಲ್ಲಿಲಾ, ಇದರ ಬಗ್ಗೆ ಅಯಾ ವ್ಯಾಪ್ತಿಯ ರೈತರು ಕಳೆದ ವರ್ಷದಲ್ಲಿ ಸಂಬAಧಿಸಿದ ನೀರಾವರಿ ಇಲಾಖೆ ಮನವಿಯನ್ನು ಸಲ್ಲಿಸಿದರು. ಅದರಂತೆಯೇ ಹಾರಂಗಿಯ ಮುಖ್ಯ ನಾಲೆಯ ದುರಸ್ತಿ ಮತ್ತು ಹೂಳು ತೆಗೆಯುವ ಕಾರ್ಯ ಆರಂಭಗೊAಡಿದೆ.

ಮುAದಿನ ತಿಂಗಳುಗಳಲ್ಲಿ ಹೆಚ್ಚು ಮಳೆ ಬಂದು ಅಣೆಕಟ್ಟೆಯು ಭರ್ತಿಯಾಗಿದ ಸಂದರ್ಭದಲ್ಲಿ ರೈತರ ಬೇಸಾಯಕ್ಕೆ ಅನುಕೂಲವಾಗುವಂತೆ ಅಣೆಕಟ್ಟೆಯ ಸಮೀಪದ ಮುಖ್ಯ ನಾಲೆ ೧ ರಿಂದ ೭ನೇ ತೂಬಿನವರೆಗೆ ಹೂಳು ತೆಗೆಯುವ ಕೆಲಸವನ್ನು ಆರಂಭ ಮಾಡಲಾಗಿದೆ ಮುಂದಿನ ಮುಂಗಾರು ಬೇಸಾಯದ ನಂತರ ಕಾವೇರಿ ನೀರಾವರಿ ನಿಗಮದ ನಿಯಮಾನುಸಾರವಾಗಿ ಹಣ ಬಿಡುಗಡೆಗೊಂಡು ಮುಖ್ಯ ನಾಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ