ಸೋಮವಾರಪೇಟೆ, ಜೂ. ೨೪ : ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಖೇಲ್ ಮಹೋತ್ಸವದಲ್ಲಿ ರಾಷ್ಟಿçÃಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದಿದ್ದು, ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಆಟಗಾರ ಗರಗಂದೂರಿನ ಸಂತೋಷ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸಫಾಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ತಾಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ಅವರುಗಳು ಸನ್ಮಾನಿಸಿದರು. ರೈತ ಮುಖಂಡರಾದ ಶಂಕರಪ್ಪ, ಜಿ.ಎಂ.ಹೂವಯ್ಯ, ಸುಜಯ್ ಬೋಪಯ್ಯ ಮತ್ತಿತರರು ಇದ್ದರು.