ಸೋಮವಾರಪೇಟೆ, ಜೂ. ೨೪ : ಭಾರತೀಯ ಜೀವ ವಿಮಾ ನಿಗಮದಲ್ಲಿ ಕಳೆದ ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಇಲ್ಲಿನ ವಾಕರ್ಸ್ ವಿಂಗ್ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಪಿ. ನಾಗೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಇಲ್ಲಿನ ಸುವಿಧ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮೋಹನ್ ನಿಶಾಂತ್, ಖಜಾಂಚಿ ನವೀನ್ ಧರ್ಮಪ್ಪ ಸೇರಿದಂತೆ ಇತರರು ಸನ್ಮಾನಿಸಿದರು.

ಈ ಸಂದರ್ಭ ಎಸ್. ಡಿ. ವಿಜೇತ್, ಶ್ರೀ ಹರ್ಷ, ಬಿ. ಎಸ್. ಸುಂದರ್, ಪಿ. ಕೆ. ರವಿ, ಎನ್. ಎನ್. ರಮೇಶ್, ಬಿ.ಕೆ. ಉದಯ್ ಕುಮಾರ್, ಬಿ.ಟಿ. ತಿಮ್ಮಶೆಟ್ಟಿ, ಬಿ.ಎಮ್. ದಿನೇಶ್, ಹೆಚ್.ಬಿ. ಹೃಷಿಕೇಶ್, ಉದಯ ರವಿ,ಹೆಚ್. ಸಿ. ನಾಗೇಶ್, ಆಶಾ ಮೋಹನ್, ಇಂದಿರಾ ರವಿ, ವಿದ್ಯಾಸುಂದರ್, ಲತಾ ನಾಗೇಶ್, ಪ್ರೇಮಾ ಹೃಷಿಕೇಶ್, ರಾಣಿ ದಿನೇಶ್, ಲತಾ ನವೀನ್, ಶರ್ಮಿಳಾ ರಮೇಶ್, ಅಶ್ವಿನಿ ಉದಯ್ ಕುಮಾರ್ ಮತ್ತಿತರರು ಇದ್ದರು.