ವಿಶೇಷ ವರದಿ: ಚನ್ನನಾಯಕ
ಪೊನ್ನಂಪೇಟೆ, ಜೂ.೨೩: ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟುಮಾನಿ ಎಂಬ ಗ್ರಾಮಕ್ಕೆ ಬರುತಿದ್ದ ಏಕೈಕ ಕೆಎಸ್ಆರ್ಟಿಸಿ ಬಸ್ಸು ಕಳೆದ ಮೂರು ತಿಂಗಳಿನಿAದ ಸಂಚಾರ ನಿಲ್ಲಿಸಿರುವುದರಿಂದ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಾರ್ವಜನಿಕರಿಗೆ ತೊಂದರೆಯಾಗಿದೆ.
ಪ್ರತಿ ದಿನ ಬೆಳಿಗ್ಗೆ ಮೈಸೂರು ಡಿಪೋದ ಕೆಎಸ್ಆರ್ಟಿಸಿ ಬಸ್ಸು ವೀರಾಜಪೇಟೆಯಿಂದ ಹೊರಟು ಬಿಟ್ಟಂಗಾಲ, ಕಂಡAಗಾಲ, ವಿ.ಬಾಡಗ, ಕುಟ್ಟಂದಿ, ಬಿ.ಶೆಟ್ಟಿಗೇರಿ ಮಾರ್ಗವಾಗಿ ಒಟ್ಟುಮಾನಿ ಭಾಗಕ್ಕೆ ಬೆಳಿಗ್ಗೆ ೮ ಗಂಟೆಗೆ ತಲುಪಿ, ಬಳಿಕ ೮.೧೦ ಕ್ಕೆ ಅದೇ ಮಾರ್ಗವಾಗಿ ವೀರಾಜಪೇಟೆಗೆ ತೆರಳುತ್ತಿತ್ತು. ವಿದ್ಯಾರ್ಥಿಗಳು ಇದೇ ಬಸ್ಸಿನಲ್ಲಿ ಹೊರಟು ತಾವು ವ್ಯಾಸಂಗ ಮಾಡುವ ಶಾಲಾ ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪುತ್ತಿದ್ದರು. ಮತ್ತೆ ಅದೇ ಬಸ್ಸಿನಲ್ಲಿ ಸಂಜೆ ೪.೩೦ ಕ್ಕೆ ವೀರಾಜಪೇಟೆಯಿಂದ ಹೊರಟು ತಮ್ಮ ಗ್ರಾಮಗಳಿಗೆ ಸುರಕ್ಷಿತವಾಗಿ ಹಿಂತಿರುಗುತ್ತಿದ್ದರು. ಆದರೆ ಕಳೆದ ೩ ತಿಂಗಳಿನಿAದ ಈ ಸರ್ಕಾರಿ ಬಸ್ನ ಸಂಚಾರ ಸ್ಥಗಿತಗೊಂಡಿರುವ ಕಾರಣ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೊಂದರೆ ಉಂಟಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಒಟ್ಟುಮಾನಿಯಿಂದ ೫ ಕಿ.ಮೀ ದೂರದ ಬಿ.ಶೆಟ್ಟಿಗೇರಿ ಶಾಲೆಗೆ, ಪ್ರೌಢ ಶಾಲಾ ವಿದ್ಯಾರ್ಥಿಗಳು ಕುಟ್ಟಂದಿಗೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ೧೦ ಕಿ.ಮೀ.ದೂರದಲ್ಲಿರುವ ಬಿಟ್ಟಂಗಾಲಕ್ಕೆ ನಡೆದುಕೊಂಡೇ ಹೋಗಿ, ಅಲ್ಲಿಂದ ವೀರಾಜಪೇಟೆಗೆ
(ಮೊದಲ ಪುಟದಿಂದ) ಬೇರೆ ಬಸ್ಸಿನಲ್ಲಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ ೮.೪೫ ಕ್ಕೆ ಒಂದು ಖಾಸಗಿ ಬಸ್ ಇದ್ದು ಅದರಲ್ಲಿ ಶಾಲೆಗೆ ತಲುಪಬಹುದು, ಆದರೆ ಸಂಜೆ ಶಾಲೆ ಬಿಟ್ಟ ನಂತರ ತಮ್ಮ ಗ್ರಾಮಗಳಿಗೆ ತೆರಳಲು ಯಾವುದೇ ಬಸ್ ಇಲ್ಲ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಬಿಟ್ಟಂಗಾಲದಲ್ಲಿ ಬಸ್ಸು ಇಳಿದು, ೧೦ ಕಿ.ಮೀ.ನಡಿಗೆಯ ಮೂಲಕ ಒಟ್ಟುಮಾನಿ ತಲುಪಬೇಕು. ಒಟ್ಟುಮಾನಿ ಪ್ರದೇಶ ಮಾಕುಟ್ಟ ಅರಣ್ಯ ವಲಯ ಅಂಚಿನಲ್ಲಿ ಇರುವುದರಿಂದ ಆನೆಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲೇ ನಡೆದುಕೊಂಡು ಹೋಗಬೇಕಿದೆ. ಬಸ್ಸಿಲ್ಲದೇ ಇರುವ ಕಾರಣ ವಿಧಿಯಿಲ್ಲದೇ ಕೆಲವು ಪೋಷಕರು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಬೈಕ್ ಕೊಟ್ಟುಕಳಿಸುತ್ತಿದ್ದಾರೆ . ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಈ ಭಾಗದಲ್ಲಿ ಕೂಲಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರು ಬೇರೆ ಯಾವುದೇ ವಾಹನದಲ್ಲಿ ಶಾಲೆಗೆ ಹೋಗುವಷ್ಟು ಶಕ್ತರಾಗಿಲ್ಲ. ಮಳೆಗಾಲ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಸ್ಸಿನ ಸಮಸ್ಯೆಯಿಂದಾಗಿ ಶಾಲಾ, ಕಾಲೇಜಿನಿಂದ ದೂರ ಉಳಿದು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯೂ ಇದೆ.
ಈಗಾಗಲೇ ಗ್ರಾಮಸ್ಥರು ಸಂಬAಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿಕೊAಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ವೀರಾಜಪೇಟೆಯಿಂದ ಒಟ್ಟುಮಾನಿಗೆ ಆದಷ್ಟು ಶೀಘ್ರವಾಗಿ ಕೆಎಸ್ಆರ್ಟಿಸಿ ಬಸ್ಸನ್ನು ಪುನರಾರಂಭಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಈ ಬಗ್ಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದೆ.