ವೀರಾಜಪೇಟೆ, ಜೂ. ೨೪ : ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವೀರಾಜಪೇಟೆ ಹೊರವಲಯ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ.

ಕೇರಳ ರಾಜ್ಯದ ಇರಿಟ್ಟಿ ಉಳಿಕಲ್ಲ್ ವಯ್ಯತ್ತೂರು ಗ್ರಾಮದ ನಿವಾಸಿಗಳಾದ ಶ್ರೀನಾಥ್ (೩೫) ಮತ್ತು ಪಿಯೂಷ್ (೩೩) ಅಕ್ರಮ ಗೋ ಸಾಗಾಟ ಮಾಡುವ ವೇಳೆ ಬಂಧಿತ ಆರೋಪಿಗಳು.

ಕೇರಳ ರಾಜ್ಯದ ಕಸಾಯಿಕಾನೆಗೆ ಗೋವುಗಳನ್ನು ಸಾಗಾಟ ಮಾಡಲು ಚಿಕ್ಕಮಂಗಳೂರುವಿನ ವಿವಿಧ ಭಾಗಗಳಿಂದ ಗೋವುಗಳನ್ನು ಖರೀದಿ ಮಾಡಿ ಕೇರಳಕ್ಕೆ ಸಾಗಾಟ ಮಾಡಲು ಬಂಧಿತರು ಮುಂದಾಗಿದ್ದರು. ತಾ. ೨೩ರಂದು ಚಿಕ್ಕಮಂಗಳೂರುವಿನಿAದ ಹಾಸನ, ಕುಶಾಲನಗರ,

(ಮೊದಲ ಪುಟದಿಂದ) ವೀರಾಜಪೇಟೆ, ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ (ಕೆ.ಎಲ್-೮೬ಎ-೩೭೫೬)ದಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಮುಂಜಾನೆ ೭ ಗಂಟೆಯ ವೇಳೆಗೆ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭ ವಾಹನದಲ್ಲಿ ಎರಡು ಎಮ್ಮೆ, ಮೂರು ಕೋಣಗಳು ಇರುವುದು ಗೋಚರಿಸಿದೆ. ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಿತ್ತಿದ್ದುದು ತನಿಖೆಯ ಸಂದರ್ಭ ತಿಳಿದು ಬಂದಿದೆ. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನವನ್ನು ವಶ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಗೋವುಗಳನ್ನು ಗೋ ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. - ಕಿಶೋರ್ ಕುಮಾರ್ ಶೆಟ್ಟಿ