ಸಿದ್ದಾಪುರ, ಜೂ. ೨೩: ಒಡಿಶಾದಲ್ಲಿ ಆಯೋಜಿಸಿದ್ದ ಜನಜಾತಿ ಖೇಲ್ ಮಹೋತ್ಸವ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ವಾಲಿಬಾಲ್ ಅಸೋಸಿಯೇಷನ್‌ನ ಪುರುಷರ ತಂಡ ಚಿನ್ನದ ಪದಕ ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ತಂಡವನ್ನು ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಗೇಟ್ ಹಾಡಿಯ ಗಿರಿಜನ ಕಾಲೋನಿಯ ಮಾಜಿ ಗ್ರಾ.ಪಂ ಸದಸ್ಯೆ ಜೆ.ಆರ್. ಇಂದಿರಾ ರವರ ಪುತ್ರ ಸ್ಯಾಂಡಿ ಹಾಗೂ ರಮೇಶ್ ರವರ ಪುತ್ರ ಸುಬ್ರಮಣಿ ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಕಾಲೋನಿ ಯುವಕರು ರಾಷ್ಟçಮಟ್ಟದ ಕ್ರೀಡಾ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮಾಲ್ದಾರೆಯ ಕ್ರೀಡಾ ಪ್ರೇಮಿಗಳು ಹಾಗೂ ಯುವಕರ ಸ್ನೇಹಿತರು ಸೇರಿ ಪೊಲೀಸ್ ಚೆಕ್‌ಪೋಸ್ಟ್ ಬಳಿ ಫ್ಲೆಕ್ಸ್ ಅಳವಡಿಸಿ ಅಭಿನಂದಿಸಿದರು.